ನಕಲಿ ಕೊವಿಡ್ ಲಸಿಕೆ ಪಡೆದ ಸಂಸದೆ ಮಿಮಿ ಚಕ್ರವರ್ತಿ ಆರೋಗ್ಯದಲ್ಲಿ ಏರುಪೇರು!
ಕೋಲ್ಕತ್ತಾ: ನಕಲಿ ಕೊವಿಡ್ ಲಸಿಕೆ ಪಡೆದ ಕಾರಣ ತೃಣಮೂಲ ಕಾಂಗ್ರೆಸ್ ಸಂಸದೆ ಮಿಮಿ ಚಕ್ರವರ್ತಿ ಆರೋಗ್ಯದಲ್ಲಿ ಏರುಪೇರಾಗಿದ್ದು, ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸುದ್ದಿವಾಹಿನಿಯೊಂದು ವರದಿ ಮಾಡಿದೆ.
ಪಶ್ಚಿಮ ಬಂಗಾಳ ಸಂಸದೆಯಾಗಿರುವ ಮಿಮಿ ಚಕ್ರವರ್ತಿ ನಾಲ್ಕು ದಿನಗಳ ಹಿಂದೆ ಕೋಲ್ಕತ್ತಾ ಮುನ್ಸಿಪಲ್ ಕಾರ್ಪೋರೇಷನ್ ಆಯೋಜಿಸಿದೆ ಎನ್ನಲಾದ ಕೊವಿಡ್ ವ್ಯಾಕ್ಸಿನ್ ಸೆಂಟರ್ ನಲ್ಲಿ ಲಸಿಕೆ ಪಡೆದುಕೊಂಡಿದ್ದರು. ಇದಾದ ಬಳಿಕ ಅವರಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ.
ಕೊವಿಡ್ ಲಸಿಕೆ ಪಡೆದುಕೊಂಡ ವೇಳೆ ಕೊವಿಡ್ ವ್ಯಾಕ್ಸಿನ್ ಸೆಂಟರ್ ನವರು ಪ್ರಮಾಣ ಪತ್ರವನ್ನು ನೀಡದೇ ಇದ್ದಾಗ ಅವರಿಗೆ ಅನುಮಾನ ಬಂದಿತ್ತು ಎನ್ನಲಾಗಿದೆ. ಆದರೆ ಇದೀಗ ಅವರ ಆರೋಗ್ಯದಲ್ಲಿ ಏರುಪೇರಾಗಿದೆ.
ಇನ್ನೂ ನಕಲಿ ಕೊವಿಡ್ ವ್ಯಾಕ್ಸಿನ್ ನೀಡುತ್ತಿದ್ದ ದೇಬಂಜನ್ ದೇಬ್ ನನ್ನು ಈಗಾಗಲೇ ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಸಂಪೂರ್ಣ ತನಿಖೆ ನಡೆಸಬೇಕು ಎಂದು ಸಿಎಂ ಮಮತಾ ಬ್ಯಾನರ್ಜಿ ಖಡಕ್ ಸೂಚನೆಯನ್ನು ನೀಡಿದ್ದಾರೆ.
ಹೆದರಿ ಓಡಿದ್ದ ಗ್ರಾಮಸ್ಥರು 96ರ ಅಜ್ಜಿ ಮಾಡಿದ ಆ ಕೆಲಸ ಕಂಡು ಎಲ್ಲರೂ ಲಸಿಕೆ ಹಾಕಿಸಿಕೊಂಡ್ರು!