ಸನ್ನಿ ಲಿಯೋನ್ ಗೆ ಎಚ್ಚರಿಕೆ ನೀಡಿದ ಮಧ್ಯಪ್ರದೇಶದ ಗೃಹ ಸಚಿವ!

sunny leone
28/12/2021

ಮಧ್ಯಪ್ರದೇಶ: ಬಾಲಿವುಡ್ ನಟಿ ಸನ್ನಿಲಿಯೋನ್ ಅವರ ‘ಮಧುಬನ್ ಮೇ ರಾಧಿಕಾ ನಾಚೆ’ ಹಾಡನ್ನು ಯೂಟ್ಯೂಬ್ ನಿಂದ ತೆಗೆದು ಹಾಕಬೇಕು. ಇಲ್ಲವಾದರೆ, ಕಾನೂನು ಕ್ರಮ ಎದುರಿಸಲು ಸಿದ್ಧರಾಗಿ ಎಂದು ಎಂದು ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಎಚ್ಚರಿಕೆ ನೀಡಿದ್ದಾರೆ.

ಹಾಡಿನ ಬಗ್ಗೆ ನಟಿ ಸನ್ನಿ ಲಿಯೋನ್ ಕ್ಷಮೆಯಾಚಿಸಬೇಕು. ಮೂರು ದಿನದಲ್ಲಿ ಹಾಡನ್ನು ತೆಗೆದು ಹಾಕಬೇಕು. ಇಲ್ಲವಾದರೆ, ಕಾನೂನು ಕ್ರಮ ಎದುರಿಸಲು ಸಿದ್ಧವಾಗಬೇಕು ಎಂದು ನರೋತ್ತಮ್ ಮಿಶ್ರಾ ಎಚ್ಚರಿಕೆ ನೀಡಿದ್ದಾರೆ.

ಮಧುಬನ್ ಮೇ ರಾಧಿಕಾ ನಾಚೆ ಹಾಡಿನಲ್ಲಿ ನಮ್ಮ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ ಎಂದು ಕೆಲವರು ವಿವಾದ ಸೃಷ್ಟಿಸಿರುವ ಹಿನ್ನೆಲೆಯಲ್ಲಿ ಸಚಿವರು ಈ ಎಚ್ಚರಿಕೆಯನ್ನು ನಟಿಗೆ ನೀಡಿದ್ದಾರೆ. ಈ ಹಾಡನ್ನು ತೆಗೆದು ಹಾಕದಿದ್ದರೆ, ಕಾನೂನು ತಜ್ಞರ ಸಲಹೆ ಪಡೆದು ಕ್ರಮಕೈಗೊಳ್ಳುವುದಾಗಿ ಅವರು ಹೇಳಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DbJM9kayC1K4utc3ntXPdh

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಸನ್ನಿ ಲಿಯೋನ್ ಮೇಲೆ ಅರ್ಚಕರ ಕೆಂಗಣ್ಣು: ಕ್ಷಮೆ ಕೇಳದಿದ್ದರೆ ಭಾರತದಲ್ಲಿರಲು ಬಿಡಲ್ಲ ಎಂದು ಬೆದರಿಕೆ

ಮಂಡಿ ನೋವಿಗೆ ನಾಟಿ ಚಿಕಿತ್ಸೆಯ ಮೊರೆ ಹೋದ ಸಿಎಂ ಬೊಮ್ಮಾಯಿ

ರಾಜ್ಯದಲ್ಲಿ ಆಯಾ ಶಾಲೆಗಳಲ್ಲಿಯೇ ಮಕ್ಕಳಿಗೆ ಕೋವಿಡ್‌ ಲಸಿಕೆ: ಸಿಎಂ ಬಸವರಾಜ ಬೊಮ್ಮಾಯಿ

ಚಂಡೀಗಢ: ನಗರ ಪಾಲಿಕೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಭರ್ಜರಿ ಜಯ

ಕೋಮು ಪ್ರಚೋದನಕಾರಿ ಭಾಷಣ ಆರೋಪ: ಹಾರಿಕಾ ಮಂಜುನಾಥ ವಿರುದ್ಧ ಎಫ್​ಐಆರ್​ ದಾಖಲು

ಇತ್ತೀಚಿನ ಸುದ್ದಿ

Exit mobile version