ಸಂಸದ ಪ್ರತಾಪ್ ಸಿಂಹ ಒಬ್ಬ ಮುಠ್ಠಾಳ, ಅಯೋಗ್ಯ: ಏಕವಚನದಲ್ಲೇ ಶಾಸಕ ಪ್ರದೀಪ್ ಈಶ್ವರ್ ವಾಗ್ದಾಳಿ - Mahanayaka

ಸಂಸದ ಪ್ರತಾಪ್ ಸಿಂಹ ಒಬ್ಬ ಮುಠ್ಠಾಳ, ಅಯೋಗ್ಯ: ಏಕವಚನದಲ್ಲೇ ಶಾಸಕ ಪ್ರದೀಪ್ ಈಶ್ವರ್ ವಾಗ್ದಾಳಿ

pradeep eshwar
11/01/2024

ಚಿಕ್ಕಬಳ್ಳಾಪುರ: ಸಂಸದ ಪ್ರತಾಪ್ ಸಿಂಹ ವಿರುದ್ಧ ಚಿಕ್ಕಬಳ್ಳಾಪುರದಲ್ಲಿ ಶಾಸಕ ಪ್ರದೀಪ್ ಈಶ್ವರ್ ತೀವ್ರ ವಾಗ್ದಾಳಿ ನಡೆಸಿದ್ದು, ಏಕವಚನದಲ್ಲೇ ತರಾಟೆಗೆತ್ತಿಕೊಂಡಿದ್ದಾರೆ.


Provided by

ಗುರ್ಕಿ ಗ್ರಾಮದಲ್ಲಿ ಮಾತನಾಡಿದ ಪ್ರದೀಪ್ ಈಶ್ವರ್, ಸಂಸದ ಪ್ರತಾಪ್ ಸಿಂಹ ಒಬ್ಬ ಮುಠ್ಠಾಳ, ಅಯೋಗ್ಯ, 40–50 ವರ್ಷ ಅನುಭವ ಇರುವ ಸಿದ್ದರಾಮಯ್ಯ ಅವರ ಬಗ್ಗೆ ಬಾಯಿಗೆ ಬಂದ ಹಾಗೆ ಮಾತನಾಡ್ತಾನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತಾಪ್ ಸಿಂಹರವರೇ ಬಾಯಿ ಮುಚ್ಚಿಕೊಂಡು ಇರಬೇಕು. ಬಾಯಿ ತೆವಲು ಕಡಿಮೆ ಮಾಡಿಕೊಳ್ಳಬೇಕು. ಲೋಕಸಭೆಗೆ ಪಾಸ್ ಕೊಟ್ರಲ್ವೇನ್ರಿ ನೀವು ದೇಶದ್ರೋಹಿಗಳಲ್ವಾ. ಉತ್ತರ ಕೊಡಿ ಎಂದು ಪ್ರಶ್ನಿಸಿದ್ದಾರೆ.
ಸಂಸತ್ ನಲ್ಲಿ ಸ್ಮೋಕ್ ಬಾಂಬ್ ಹಾಕ್ತಾರಲ್ಲ ನಿಮಗೆ ಮಾನ ಮರ್ಯಾದೆ ಇಲ್ವಾ. ಇದೇ ಕಾಂಗ್ರೆಸ್ ಎಂಪಿ, ಎಂಎಲ್ ಎಗಳು ಪಾಸ್ ಕೊಟ್ಟಿದ್ರೆ ನೀವು ಏನ್ ಪಟ್ಟ ಕಟ್ಟುತ್ತಿದ್ರಿ ಎಂದು ಪ್ರದೀಪ್ ತರಾಟೆಗೆತ್ತಿಕೊಂಡರು.


Provided by
Provided by
Provided by
Provided by
Provided by
Provided by
Provided by
Provided by
Provided by
Provided by
Provided by
Provided by
Provided by
Provided by
Provided by
Provided by
Provided by
Provided by
Provided by
Provided by <
Provided by
Provided by
Provided by
Provided by

ಕೇಂದ್ರ ಸರ್ಕಾರ ಅಕ್ಕಿ ಕೊಡುತ್ತಿದೆ ಅಂತ ಮುಟ್ಟಾಳರಿಗೆ ಜ್ಞಾನದ ಬಗ್ಗೆ ಅವೇರ್ ಇದ್ಯಾ. ಫುಡ್ ಸೆಕ್ಯೂರಿಟಿ ಆಕ್ಟ್ ನಮ್ಮ ಮನಮೋಹನ್ ಸಿಂಗ್ ಅವಧಿಯಲ್ಲಿ ಮಾಡಿದ್ದು. ಶೇಕಡಾ 75 ರಷ್ಟು ಗ್ರಾಮೀಣ ಭಾಗಕ್ಕೆ ಶೇಕಡಾ 50 ರಷ್ಟು ಅರ್ಬನ್ ಗೆ ಕೊಡಬೇಕು ಅಂತ ಮಾಡಿದೆ ಎಂದ ಅವರು, ಸಿದ್ದರಾಮಯ್ಯ ನವರ ಬಗ್ಗೆ ಕೇವಲವಾಗಿ ಮಾತನಾಡಿದ್ರೆ ಸರಿಯಿರಲ್ಲ ಎಂದು ಹೇಳಿದ್ದಾರೆ.

ಪ್ರತಾಪ್ ಸಿಂಹ ಬಾಯಿಮುಚ್ಚಿಕೊಂಡು ಇರಬೇಕು. ಮಾತನಾಡಕ್ಕೆ ನಿನಗೇ ಅಲ್ಲ ನಮಗೂ ಬರುತ್ತೆ. ನೀವು ಒಂದು ಕಲ್ಲು ಹಾಕಿದ್ರೆ ನಾವು ನಾಲ್ಕು ಕಲ್ಲು ಹಾಕಕ್ಕೂ ಬರುತ್ತೆ ಎಂದು ಪ್ರದೀಪ್ ಗುಡುಗಿದ್ದಾರೆ.

ಇತ್ತೀಚಿನ ಸುದ್ದಿ