ತುಲಾಭಾರದ ವೇಳೆ ತಕ್ಕಡಿಯ ಹಗ್ಗ ಕಳಚಿ ಬಿದ್ದು ಪೇಜಾವರ ಶ್ರೀಗೆ ಗಾಯ - Mahanayaka
4:26 AM Wednesday 11 - December 2024

ತುಲಾಭಾರದ ವೇಳೆ ತಕ್ಕಡಿಯ ಹಗ್ಗ ಕಳಚಿ ಬಿದ್ದು ಪೇಜಾವರ ಶ್ರೀಗೆ ಗಾಯ

pejavar shree
03/11/2023

ಉಡುಪಿ: ಪೇಜಾವರ ಸ್ವಾಮೀಜಿಯ ತುಲಾಭಾರದ ವೇಳೆ ತಕ್ಕಡಿಯ ಹಗ್ಗ ಕಳಚಿ ಬಿದ್ದ ಘಟನೆ ನಡೆದಿದೆ.

ಉಡುಪಿ ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ದೆಹಲಿ ಪ್ರವಾಸದಲ್ಲಿದ್ದಾರೆ. ದೆಹಲಿಯ ಪೇಜಾವರ ಮಠಕ್ಕೆ ಭೇಟಿ ನೀಡಿದ ಸಂದರ್ಭ, ಚಾತುರ್ಮಾಸ್ಯ ಪೂರ್ಣಗೊಳಿಸಿ ಬಂದ ಹಿನ್ನೆಲೆಯಲ್ಲಿ ಭಕ್ತರು ಸ್ವಾಮೀಜಿಯವರಿಗೆ ತುಲಾಭಾರ ನಡೆಸಿದ್ದಾರೆ.

ಈ ಸಂದರ್ಭದಲ್ಲಿ ತಕ್ಕಡಿಯ ಹಗ್ಗ ಕಳಚಿಬಿದ್ದಿದೆ. ಸ್ವಾಮೀಜಿಯ ತಲೆಗೆ ತರಚಿದ ಗಾಯವಾಗಿದ್ದು, ಗಂಭೀರ ಗಾಯವಾಗಿಲ್ಲ ಎಂದು ಮಠದ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

ವಿಡಿಯೋ ನೋಡಿ:

ಇತ್ತೀಚಿನ ಸುದ್ದಿ