ವಿಚ್ಛೇದಿತೆ ಎಂದು “ಮಿಸಸ್ ಶ್ರೀಲಂಕಾ” ವಿಜೇತೆಯ ಕಿರೀಟ ವೇದಿಕೆಯಲ್ಲಿಯೇ ಕಿತ್ತುಕೊಂಡರು!
ಕೊಲಂಬೋ: “ಮಿಸಸ್ ಶ್ರೀಲಂಕಾ” ಸೌಂದರ್ಯ ಸ್ಪರ್ಧೆಯಲ್ಲಿ ವಿಜೇತೆಗೆ ತೊಡಿಸಲಾಗಿದ್ದ ಕಿರೀಟವನ್ನು ವೇದಿಕೆಯಲ್ಲಿಯೇ ಕಿತ್ತುಕೊಂಡ ಘಟನೆ ನಡೆದಿದ್ದು, ಘಟನೆಯಿಂದ ತೀವ್ರವಾಗಿ ಮುಜುಗರಕ್ಕೊಳಗಾದ ವಿಜೇತೆ ಸ್ಥಳದಿಂದ ತೆರಳಿದ್ದಾರೆ.
ಭಾನುವಾರ ರಾತ್ರಿ ಮಿಸಸ್ ಶ್ರೀಲಂಕಾ ಸೌಂದರ್ಯ ಸ್ಪರ್ಧೆ ಪುಷ್ಪಿಕಾ ಡಿ ಸಿಲ್ವಾ ಮಿಸಸ್ ಶ್ರೀಲಂಕಾ ವಿಜೇತೆಯಾಗಿ ಕಿರೀಟ ಧರಿಸಿದರು. ಆದರೆ 2019ರ ಶ್ರೀಲಂಕಾದ ವಿಜೇತೆ ವರ್ಲ್ಡ್ ಕರೋಲಿನ್ ಜೂರಿ, ನಿಯಮದ ಪ್ರಕಾರ ವಿಚ್ಛೇದಿತ ಮಹಿಳೆಯರು ಈ ಸ್ಪರ್ಧೆಯಲ್ಲಿ ಭಾಗವಹಿಸುವಂತಿಲ್ಲ ಎಂದು ಪುಷ್ಪಿಕಾ ಡಿ ಸಿಲ್ವಾ ತಲೆ ಮೇಲೆ ಧರಿಸಿದ್ದ ಕಿರೀಟವನ್ನು ಕಸಿದುಕೊಂಡಿದ್ದಾರೆ.
ಇನ್ನೂ ಘಟನೆ ಸಂಬಂಧ ಪುಷ್ಪಿಕಾ ಡಿ ಸಿಲ್ವಾ ತಮ್ಮ ಫೇಸ್ ಬುಕ್ ಖಾತೆಯಲ್ಲಿ ನೋವು ಹಂಚಿಕೊಂಡಿದ್ದು, ಕಿರೀಟವನ್ನು ಎಳೆದಾಗ ತಮ್ಮ ತಲೆಗೆ ಪೆಟ್ಟಾಗಿರುವುದಾಗಿ ಪುಷ್ಪಿಕಾ ಡಿ ಸಿಲ್ವಾ ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಇನ್ನೂ ಸ್ಪರ್ಧೆಯ ಆಯೋಜಕರು, ಪುಷ್ಪಿಕಾ ಡಿ ಸಿಲ್ವಾ ವಿಚ್ಛೇದಿತ ಮಹಿಳೆ ಅಲ್ಲ. ಹಾಗಾಗಿ ಅವರ ಕಿರೀಟವನ್ನು ಮತ್ತೆ ಅವರಿಗೇ ಹಿಂದಿರುಗಿಸಬೇಕು ಎಂದು ಹೇಳಿದ್ದು, ಇದರನ್ವಯ ಮಂಗಳವಾರ ಕಿರೀಟವನ್ನು ಮತ್ತೆ ಪುಷ್ಪಿಕಾ ಡಿ ಸಿಲ್ವಾರವರಿಗೆ ಹಿಂದಿರುಗಿಸಲಾಗಿದೆ.