ಮೃಗಾಲಯದಲ್ಲಿ ನಿಂತು ನಟ ದರ್ಶನ್ ಮಾಡಿದ ಮನವಿ ಏನು ಗೊತ್ತಾ? - Mahanayaka
6:25 AM Wednesday 5 - February 2025

ಮೃಗಾಲಯದಲ್ಲಿ ನಿಂತು ನಟ ದರ್ಶನ್ ಮಾಡಿದ ಮನವಿ ಏನು ಗೊತ್ತಾ?

actor darshan
05/06/2021

ಮೈಸೂರು: ಕೊರೊನಾ ಸಂದರ್ಭದಲ್ಲಿ ಕೇವಲ ಮನುಷ್ಯರು ಮಾತ್ರವಲ್ಲ, ಮೃಗಗಳು ಕೂಡ ಸಮಸ್ಯೆಯಲ್ಲಿವೆ. ಇದೇ ಸಂದರ್ಭದಲ್ಲಿ  ಅರಣ್ಯ ಇಲಾಖೆ ರಾಯಭಾರಿ ದರ್ಶನ್ ವಿಶೇಷ ಮನವಿಯೊಂದನ್ನು  ಮಾಡಿಕೊಂಡಿದ್ದಾರೆ.

ಮನೆಗಳಲ್ಲಿ ಪ್ರಾಣಿ ಸಾಕಲು ಎಲ್ಲರಿಗೂ ಆಗಲ್ಲ, ಆದರೆ ಮೃಗಾಲಯದಲ್ಲಿರುವ ಪ್ರಾಣಿಗಳನ್ನು ದತ್ತು ಪಡೆಯಬಹುದು. ಒಂದು ಲವ್ ಬರ್ಡ್ ಗೆ 1 ಸಾವಿರ ರೂಪಾಯಿ, ಹುಲಿಗೆ 1 ಲಕ್ಷ ರೂ. ಕಟ್ಟಬೇಕು ಎಂದು ದರ್ಶನ್ ಹೇಳಿದ್ದಾರೆ.

ಪ್ರತಿ ತಿಂಗಳೂ ಹಣ ಕಟ್ಟಬೇಕಾಗಿಲ್ಲ, ವರ್ಷಕ್ಕೊಮ್ಮೆ ಹಣ ಪಾವತಿ ಮಾಡಬೇಕು. ಈ ಹಣಕ್ಕೆ ತೆರಿಗೆ ವಿನಾಯಿತಿ ಕೂಡ ಸಿಗುತ್ತದೆ ಎಂದು  ಕರ್ನಾಟಕ ಮೃಗಾಲಯ ಪ್ರಾಧಿಕಾರಕ್ಕೆ ನೆರವಾಗುವಂತೆ ದರ್ಶನ್ ಮನವಿ ಮಾಡಿದ್ದಾರೆ.

ಇತ್ತೀಚಿನ ಸುದ್ದಿ