ರಾತ್ರಿ ಶವಾಗಾರದಲ್ಲಿರಿಸಲಾಗಿದ್ದ ಮೃತದೇಹದ ಮೂಗು ಬೆಳಗ್ಗಿನ ವೇಳೆ ಮಾಯ | ಅಷ್ಟಕ್ಕೂ ನಡೆದದ್ದೇನು?

kerala
16/06/2021

ಪಾಲಕ್ಕಾಡ್: ಆಸ್ಪತ್ರೆಯ ಶವಾಗಾರದಲ್ಲಿರಿಸಿದ್ದ ಮಹಿಳೆಯ ಮೃತದೇಹವನ್ನು  ಇಲಿಗಳು ತಿಂದು ವಿರೂಪಗೊಳಿಸಿದ ಘಟನೆ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಸಂಬಂಧಿಕರು ಆಸ್ಪತ್ರೆ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಿದ್ದಾರೆ.

ಮನಿಸ್ಸೆರಿಯ ಒಟ್ಟಾಪಲಂ ಮೂಲದ ಸುಂದರಿ ಎಂಬವರಿಗೆ ಹೃದಯಾಘಾತವಾಗಿದ್ದು, ಹೀಗಾಗಿ ಅವರನ್ನು ಪಟ್ಟಾಂಬಿ ಸೇವಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ನೀಡಿದ ಬಳಿಕವೂ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು.

ಮೃತದೇಹವನ್ನು ರಾತ್ರಿ ಸಾಗಿಸುವುದು ಕಷ್ಟಕರವಾಗಿರುವುದರಿಂದ ಆಸ್ಪತ್ರೆಯ ಶವಗಾರದಲ್ಲಿರಿಸಲಾಗಿತ್ತು. ಬೆಳಗ್ಗೆ ಸಂಬಂಧಿಕರು ಮೃತದೇಹವನ್ನು ಆಸ್ಪತ್ರೆಯಿಂದ ಒಯ್ಯಲು ಮುಂದಾದಾಗ ಮೃತದೇಹದ ಮುಖದ ಮೂಗಿಗೆ ಪ್ಲಾಸ್ಟರ್ ಹಾಕಿರುವುದು ಕಂಡು ಬಂದಿತ್ತು. ಅನುಮಾನ ಬಂದು ನೋಡಿದಾಗ ಇಲಿ ತಿಂದಿರುವುದು ತಿಳಿದು ಬಂದಿದೆ. ಇಲಿ ಮೃತದೇಹದ ಮೂಗು ಹಾಗೂ ಕೆನ್ನೆಯನ್ನು ಕಚ್ಚಿ ವಿರೂಪ ಮಾಡಿದೆ.

ಘಟನೆಗೆ ಸಂಬಂಧಿಸಿದಂತೆ ಆಸ್ಪತ್ರೆಯ ಅವ್ಯವಸ್ಥೆಯ ಬಗ್ಗೆ ಸಂಬಂಧಿಕರು ದೂರಿದ್ದು, ಆಸ್ಪತ್ರೆಯ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಿದ್ದಾರೆ.

ಇತ್ತೀಚಿನ ಸುದ್ದಿ

Exit mobile version