ತಂದೆಯ ಮೃತದೇಹವನ್ನು ಕಾರಿನ ಟಾಪ್ ಗೆ ಕಟ್ಟಿ ಸಾಗಿಸಿದ ಪುತ್ರ | ಕಾರಣ ಏನು ಗೊತ್ತಾ?
26/04/2021
ಆಗ್ರಾ: ಕೊರೊನಾ ಮೊದಲ ಅಲೆ ಬಡವರಿಗೆ ಶಾಪವಾಗಿ ಪರಿಣಮಿಸಿದರೆ, ಎರಡನೇ ಅಲೆ ಎಲ್ಲ ವರ್ಗಗಳ ಜನರನ್ನು ಕಾಡುತ್ತಿದೆ. ಆಗ್ರಾದ ಮೋಕ್ಷಧಾಮ ಎಂಬಲ್ಲಿ ಮೃತ ಕೊರೊನಾ ರೋಗಿಯೋರ್ವರ ಮೃತದೇಹವನ್ನು ಮಗ ತನ್ನ ಕಾರಿನ ಟಾಪ್ ಗೆ ಕಟ್ಟಿಕೊಂಡು ಕೊಂಡೊಯ್ದ ಘಟನೆ ನಡೆದಿದೆ.
ಕೊರೊನಾ ಸೋಂಕಿಗೆ ಬಲಿಯಾದವರನ್ನು ಕೊಂಡೊಯ್ಯಲು ಆಂಬುಲೆನ್ಸ್ ಸಿಗದ ಕಾರಣ. ಕೊರೊನಾದಿಂದ ಮೃತಪಟ್ಟ ತನ್ನ ತಂದೆಯ ಮೃತದೇಹವನ್ನು ಕಾರಿನ ಟಾಪ್ ನಲ್ಲಿ ವಸ್ತುಗಳನ್ನು ಕಟ್ಟುವಂತೆ ಕಟ್ಟಿ ಅಂತ್ಯಕ್ರಿಯೆಯೇ ಸ್ಮಶಾನಕ್ಕೆ ಕೊಂಡೊಯ್ದ ಘಟನೆ ನಡೆದಿದೆ.
ಕೇಂದ್ರ ಸರ್ಕಾರದ ತೀವ್ರ ನಿರ್ಲಕ್ಷ್ಯದ ಪರಿಣಾಮ ದೇಶದಲ್ಲಿ ಆರೋಗ್ಯ ಸೌಲಭ್ಯಗಳಲ್ಲಿ ಭಾರೀ ಅಭಾವ ಉಂಟಾಗಿದೆ. ಸದ್ಯ ಪ್ರತಿ ದಿನ ಜನರು ದುರಂತಗಳನ್ನೇ ಪ್ರತಿದಿನ ನೋಡುವಂತಾಗಿದ್ದು, ಸಾವು ಎನ್ನುವುದು ದೇಶದಲ್ಲಿ ಅಗ್ಗದ ವಸ್ತುವಾಗಿ ಪರಿಣಮಿಸಿದೆ.