ಮೃತಪಟ್ಟ ಪ್ರತಿಭಟನಾಕಾರನ ಮೃತದೇಹಕ್ಕೆ ಥಳಿಸಿ, ಒದ್ದು ವಿಕೃತಿ ಮೆರೆದ ಪತ್ರಕರ್ತ
ಗುವಾಹತಿ: ಮುಸ್ಲಿಮ್ ಬಹುಸಂಖ್ಯಾತ ಪ್ರದೇಶವಾದ ಅಸ್ಸಾಂನ ಧೋಲ್ಪುರ ಗ್ರಾಮದಲ್ಲಿ ನಡೆದ ತೆರವು ಕಾರ್ಯಾಚರಣೆಯ ವೇಳೆ ಹಿಂಸಾಚಾರ ಸೃಷ್ಟಿಯಾಗಿದ್ದು, ಈ ವೇಳೆ ಸರ್ಕಾರಿ ಕ್ಯಾಮೆರಾಮ್ಯಾನ್ ಅಥವಾ ಒಬ್ಬ ಪತ್ರ ಕರ್ತ ಸತ್ತು ಬಿದ್ದಿದ್ದ ಮುಸ್ಲಿಮ್ ವ್ಯಕ್ತಿಯ ಮೃತದೇಹಕ್ಕೆ ಹಲ್ಲೆ ನಡೆಸುತ್ತಿರುವ ವಿಡಿಯೋವೊಂದು ವೈರಲ್ ಆಗಿದ್ದು, ಈ ವಿಕೃತಿಯ ವಿರುದ್ಧ ವ್ಯಾಪಕವಾದ ಆಕ್ರೋಶ ಕೇಳಿ ಬಂದಿದೆ.
ಗಲಭೆಯ ವೇಳೆ ಲಾಠಿ ಹಾಗೂ ಬಂದೂಕುಧಾರಿ ಪೊಲೀಸರು ಪ್ರತಿಭಟನಾಕಾರರ ಮೇಲೆ ಮನಸೋ ಇಚ್ಛೆ ಗುಂಡಿನ ಸುರಿಮಳೆ ಸುರಿದ್ದಾರೆ. ಈ ವೇಳೆ ಆಕ್ರೋಶಿತ ಪ್ರತಿಭಟನಾಕಾರನೊಬ್ಬ, ಬೃಹತ್ ಸಂಖ್ಯೆಯಲ್ಲಿ ಪೊಲೀಸರು ಇದ್ದರೂ, ಗುಂಡೇಟಿಗೂ ಭಯಪಡದೇ ದೊಣ್ಣೆ ಹಿಡಿದುಕೊಂಡು ಪೊಲೀಸರ ಮುಂದೆ ಬಂದಿದ್ದ ಆತನ ಮೇಲೆ ಪೊಲೀಸರು ಗುಂಡಿನ ಮಳೆ ಸುರಿಸಿದ್ದಾರೆ. ಗುಂಡೇಟಿನಿಂದ ಆತ ಸಾವಿಗೀಡಾದರೂ ಪತ್ರಕರ್ತನೋರ್ವ ಪ್ರತಿಭಟನಾಕಾರನ ಮೃತದೇಹದ ಮೇಲೆ ಹಲ್ಲೆ ನಡೆಸುತ್ತಾನೆ. ಹಾರಿ ಹಾರಿ ಕಾಲಿನಿಂದ ಒದೆಯುತ್ತಾನೆ. ಈ ವೇಳೆ ಪೊಲೀಸರು ಆತನನ್ನು ತಡೆದರೂ ಆತ ಮತ್ತೆ ಮತ್ತೆ ತನ್ನ ವಿಕೃತ ಕೆಲಸವನ್ನು ಮುಂದುವರಿಸಿದ್ದ.
ಈ ಘಟನೆಯ ಬಗ್ಗೆ ಸಾರ್ವಜನಿಕ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ಸರ್ಕಾರವು ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಈ ಘಟನೆಯ ತನಿಖೆಗೆ ಆದೇಶಿಸಿದ್ದು, ಈ ಬಗ್ಗೆ ಗೃಹ ಮತ್ತು ರಾಜಕೀಯ ಇಲಾಖೆ ಕಾರ್ಯದರ್ಶಿ ದೇಬಪ್ರಸಾದ್ ಮಿಶ್ರ ಆದೇಶ ಹೊರಡಿಸಿದ್ದಾರೆ.
ಧೋಲ್ ಪುರದಲ್ಲಿ ಸೋಮವಾರ ನಡೆದ ತೆರವು ಕಾರ್ಯಾಚರಣೆಯಲ್ಲಿ ಸುಮಾರು 800 ಕುಟುಂಬಗಳನ್ನು ತೆರೆವುಗೊಳಿಸಲಾಗಿತ್ತು. ಕೃಷಿ ಯೋಜನೆಯೊಂದಕ್ಕೆ ಭೂಮಿಯನ್ನು ವಶಪಡಿಸಿಕೊಳ್ಳುವ ಸಲುವಾಗಿ ಸರಕಾರ ಈ ಕಾರ್ಯಾಚರಣೆ ನಡೆಸಿತ್ತು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/KPRE32QAEFL3ZvRW2wbYvj
ಇನ್ನಷ್ಟು ಸುದ್ದಿಗಳು…
ಕಬ್ಬಿನ ಗದ್ದೆಯಲ್ಲಿ ಬೆತ್ತಲೆಯಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಬಾಲಕಿ!
ಮನಮೋಹನ್ ಸಿಂಗ್ ವಿಮಾನದಲ್ಲಿಯೇ ಪತ್ರಿಕಾಗೋಷ್ಠಿ ನಡೆಸಿದ್ದರು | ಮೋದಿ ಫೋಟೋಗೆ ಕಾಂಗ್ರೆಸ್ ತಿರುಗೇಟು
ಕೊನೆಗೂ ಕೋರ್ಟ್ ನಲ್ಲಿ ಹೇಳಿಕೆ ದಾಖಲಿಸಿದ ಮೈಸೂರು ಸಾಮೂಹಿಕ ಅತ್ಯಾಚಾರ ಪ್ರಕರಣದ ಸಂತ್ರಸ್ತೆ
ಹಾಲು ಬೇಕೆಂದು ಹಠ ಮಾಡುತ್ತಿದ್ದ ಮಗುವನ್ನು ನೆಲಕ್ಕೆ ಬಡಿದು ಹತ್ಯೆ ಮಾಡಿದ ತಾಯಿ!
ಮೊಬೈಲ್ ಚಾರ್ಜ್ ಇಡುವ ವೇಳೆ ವಿದ್ಯುತ್ ಶಾಕ್ ತಗಲಿ ಒಂದೇ ಕುಟುಂಬದ ಮೂವರ ದಾರುಣ ಸಾವು
ಮದುವೆ ಮಂಟಪದಲ್ಲಿ ಗುಟ್ಕಾ ಜಗಿದ ವರನಿಗೆ ಕಪಾಳಕ್ಕೆ ಬಾರಿಸಿ ಉಗುಳಿಸಿದ ವಧು! | ವಿಡಿಯೋ ವೈರಲ್
ಪಾರ್ಟಿ ಮುಗಿಸಿ ಬರುತ್ತಿದ್ದ ಯುವತಿಯ ಮೇಲೆ ಕ್ಯಾಬ್ ಡ್ರೈವರ್ ನಿಂದ ಅತ್ಯಾಚಾರ!