ಅತ್ತೆಯ ಸಮಾಧಾನಕ್ಕಾಗಿ ಹೃದಯಾಘಾತದಿಂದ ಮೃತಪಟ್ಟ ಸೊಸೆಯನ್ನು ನೇಣಿಗೇರಿಸಲಾಯಿತು!
ಟೆಹ್ರಾನ್: ಅತ್ತೆಯ ಸಮಾಧಾನಕ್ಕಾಗಿ ಸೊಸೆಯ ಮೃತದೇಹವನ್ನು ನೇಣಿಗೇರಿಸಿರುವ ಅಮಾನವೀಯ ಘಟನೆಯೊಂದು ಶಿಕ್ಷೆಯ ರೂಪದಲ್ಲಿ ನೀಡಲಾಗಿದ್ದು, ಸೊಸೆ ನೇಣಿಗೇರುವುದನ್ನು ನೋಡಬೇಕು ಎನ್ನುವ ಅತ್ತೆಯ ಆಸೆಯನ್ನು ನೆರವೇರಿಸಲು ಇಂತಹದ್ದೊಂದು ವಿಕೃತಿ ಮೆರೆಯಲಾಗಿದೆ.
ಪತಿ ತನ್ನ ಜೊತೆಗೆ ಅಸಭ್ಯವಾಗಿ ವರ್ತಿಸುತ್ತಿದ್ದಾನೆ ಎಂದು ಆಕ್ರೋಶಗೊಂಡ ಜಹ್ರಾ ಇಸ್ಮಾಯಿಲಿ ಎಂಬ ಮಹಿಳೆ ತನ್ನ ಗಂಡನನ್ನು ಹತ್ಯೆ ಮಾಡಿದ್ದಾಳೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇರಾನ್ ನ್ಯಾಯಾಲಯವು ಆಕೆಗೆ ಮರಣ ದಂಡನೆ ಶಿಕ್ಷೆ ವಿಧಿಸಿತ್ತು.
ಮರಣದಂಡನೆ ವಿಧಿಸಿದ ದಿನದಿಂದಲೂ ಅತ್ತೆ ತನ್ನ ಸೊಸೆ ನೇಣಿಗೇರುವುದನ್ನು ನೋಡಬೇಕು ಎಂದು ಕಾಯುತ್ತಿದ್ದಳು. ಆದರೆ ನೇಣಿಗೆ ಹಾಕುವ ದಿನ ಸೊಸೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ. ಆದರೆ ಸೊಸೆ ನೇಣಿಗೇರುವುದನ್ನು ನೋಡಬೇಕು ಎಂದು ಕಾಯುತ್ತಿದ್ದ ಅತ್ತೆಯ ಮನಸ್ಸು ಸಮಾಧಾನಕ್ಕಾಗಿ ಅಧಿಕಾರಿಗಳು ಮೃತದೇಹವನ್ನು ನೇಣಿಗೇರಿಸಿದ್ದಾರೆ.
ಈ ವಿದೇಶಗಳ ಕಾನೂನುಗಳನ್ನು ನೋಡಿದರೆ ಭಾರತೀಯ ಕಾನೂನು ನಿಜಕ್ಕೂ ಅದ್ಭುತ ಎನಿಸಲ್ಪಡುತ್ತದೆ. ಇಲ್ಲಿ ಶಿಕ್ಷೆಗೂ, ಪ್ರತಿಕಾರಕ್ಕೂ ವ್ಯತ್ಯಾಸ ಇದೆ. ವಿದೇಶದಲ್ಲಿ ಪ್ರತಿಕಾರವೇ ಶಿಕ್ಷೆಯಾಗುತ್ತದೆ. ಆದರೆ ಭಾರತೀಯ ಕಾನೂನಿನಲ್ಲಿ ಅಪರಾಧಿಯ ಮನಪರಿವರ್ತನೆ ಮಾಡುವುದೇ ಶಿಕ್ಷೆಯಾಗಿದೆ. ಒಬ್ಬ ಭಯೋತ್ಪಾದಕನಾದರೂ ಆತನ ಮೃತದೇಹಕ್ಕೆ ಅಪಮಾನ ಮಾಡುವ ಕಾನೂನು ಭಾರತದಲ್ಲಿಲ್ಲ.