ಮುಚ್ಚಿದ ಮುಸ್ಲಿಂ ವ್ಯಾಪಾರಿಗಳ ಅಂಗಡಿಗಳಿಗೆ ದೈವ ಗಳಿಂದಲೇ ಚಾಲನೆ
ಮಂಗಳೂರು: ಕಳೆದ ಕೆಲವು ವಾರಗಳಿಂದ ರಾಜ್ಯದ ಹಲವೆಡೆ ಮುಸ್ಲಿಂ ವ್ಯಾಪಾರಿಗಳ ವ್ಯಾಪಾರಕ್ಕೆ ಅಡ್ಡಿ ಮಾಡುವಂತಹ ಘಟನೆಗಳು ನಡೆಯುತ್ತಿದೆ.ಆದರೆ, ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗದಲ್ಲಿರುವ ಕೇರಳ ರಾಜ್ಯದ ಮಂಜೇಶ್ವರ ತಾಲೂಕಿನಲ್ಲೊಂದು ಸಾಮರಸ್ಯದ ಘಟನೆ ಜರುಗಿದೆ. ದೇವಸ್ಥಾನದ ಜಾತ್ರೆಯ ಸಂದರ್ಭದಲ್ಲಿ ದೈವಗಳೇ ಮುಸ್ಲಿಂ ವ್ಯಾಪಾರಿಗಳ ವ್ಯಾಪಾರಕ್ಕೆ ಚಾಲನೆ ನೀಡುವ ಮೂಲಕ ಜನರಲ್ಲಿ ಕೋಮು ಸಾಮರಸ್ಯದ ಪಾಠವನ್ನು ಮಾಡಿವೆ.
ಕೇರಳ-ಕರ್ನಾಟಕ ಗಡಿ ಭಾಗವಾದ ಮಂಜೇಶ್ವರ ತಾಲೂಕಿನ ಉದ್ಯಾವರದ ಶ್ರೀ ಅರಸು ಮಂಜಿಷ್ಣಾರ್ ಕ್ಷೇತ್ರದಲ್ಲಿ ಈ ಸಾಮರಸ್ಯದ ಘಟನೆ ಜರುಗಿದೆ.ಪ್ರತಿವರ್ಷವೂ ಈ ದೇವಸ್ಥಾನದ ಜಾತ್ರೆಯು ಅದ್ದೂರಿಯಾಗಿ ನಡೆಯುತ್ತಿದೆ ಇದಕ್ಕೂ ಮುನ್ನ ಜಾತ್ರೆಗೆ ದಿನನಿಶ್ಚಯ ಮಾಡುವ ಕುದಿಕಳ ಎಂಬ ಕಾರ್ಯಕ್ರಮವಿದ್ದು, ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಮುಸ್ಲಿಂ ಸಮುದಾಯಕ್ಕೊಳಪಟ್ಟ ವ್ಯಕ್ತಿಯಿಂದಲೇ ಆವರಣದೊಳಗೆ ಸಂತೆಯನ್ನು ಸ್ಥಾಪಿಸಿ ಅಲ್ಲಿಂದಲೇ ಕ್ಷೇತ್ರದ ದೈವಗಳು ತೆಂಗಿನಕಾಯಿ ಮತ್ತು ವೀಳ್ಯದೆಲೆ ಖರೀದಿಸಿ ಕ್ಷೇತ್ರದ ಉತ್ಸವಕ್ಕೆ ದಿನನಿಶ್ಚಯ ಮಾಡುತ್ತವೆ.
ದೈವಸ್ಥಾನದ ಸಿಂಹಾಸನ ಕಟ್ಟೆಯ ಒಂದು ಭಾಗದಲ್ಲಿ ಮುಸಲ್ಮಾನರು ಹಾಗೂ ಮತ್ತೊಂದು ಭಾಗದಲ್ಲಿ ಬ್ರಹ್ಮಸಭೆ (ಕ್ಷೇತ್ರಕ್ಕೆ ಸಂಬಂಧಪಟ್ಟವರು) ಕುಳಿತುಕೊಂಡು ದೈವ ಪಾತ್ರಿಗಳ ಆಗಮನದೊಂದಿಗೆ ದಿನ ನಿಶ್ಚಯವನ್ನು ಓದಿ ಹೇಳುವ ವಿಶೇಷ ಸಂಪ್ರದಾಯವಿದೆ.
ಅಂದ ಹಾಗೆ, ದೈವಗಳ ಆರಾಧನೆಯು ಬ್ರಾಹ್ಮಣ್ಯದ ಆಚರಣೆಗಳಿಂದ ಭಿನ್ನವಾದದ್ದು, ಕರಾವಳಿಯಲ್ಲಿ ದೈವಾರಾಧನೆಗೆ ಮುಸಲ್ಮಾನರು, ಕ್ರೈಸ್ತರು, ಬೌದ್ಧರು ಕೂಡ ಗೌರವ ಸೂಚಿಸುತ್ತಾರೆ. ಇದು ಹೊರಗಿನ ಸಂಪ್ರದಾಯಕ್ಕಿಂತ ಭಿನ್ನವಾದದ್ದಾಗಿದೆ. ಕರಾವಳಿಯಲ್ಲಿ ದೇವರಿಗಿಂತ ದೈವಗಳು ಹೆಚ್ಚು ಪ್ರಮುಖವಾಗಿದೆ. ಆದರೆ, ಸದ್ಯ ಬ್ರಾಹ್ಮಣ್ಯದ ಆಚರಣೆಗಳು ದೈವಾರಾಧನೆಯ ಒಳಗೆ ಬರುತ್ತಿದ್ದು, ದೈವಾರಾಧನೆ ಸ್ವಂತಿಕೆ ಕಳೆದುಕೊಳ್ಳುವ ಭೀತಿ ಸೃಷ್ಟಿಯಾಗುತ್ತಿದೆ. ದೈವಾರಾಧನೆ ಎಂದರೆ, ಸಮಾನತೆಯ ಪ್ರತೀಕವಾಗಿದ್ದು, ಜಾತಿ ಭೇದಗಳನ್ನು ಮರೆತು ಎಲ್ಲರೂ ಒಟ್ಟಾಗುತ್ತಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1duNIQRfXnJcfQKWPzNqD
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಪತ್ನಿ ಹೆರಿಗೆ ಕೊಠಡಿಯಲ್ಲಿ, ಪತಿ ಬಾರ್ ನಲ್ಲಿ, ಮಗ ರಸ್ತೆಯಲ್ಲಿ | ಮನಕಲಕುವ ಘಟನೆ
ಒಟ್ಟಿಗೆ ಕಾಡಿಗೆ ತೆರಳಿದ್ದ 3 ಯುವತಿಯರ ಮೃತದೇಹ ಒಂದೇ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ!
ಸೈಕಲ್ ಕೊಡಿಸು ಎಂದು ಹಠ ಹಿಡಿದದ್ದಕ್ಕೆ ಮಗಳ ಮೇಲೆ ಕುದಿಯುವ ನೀರು ಎರಚಿದ ಪಾಪಿ!