ಕಾಂಗ್ರೆಸ್ ಔರಾದ್ ನಗರ ಘಟಕದ ಅಧ್ಯಕ್ಷರಾಗಿ ಮುದಾಳೆ ನೇಮಕ
ಔರಾದ್: ಕಾಂಗ್ರೆಸ್ ಪಕ್ಷದ ಔರಾದ ಬ್ಲಾಕ್ ನಗರ ಘಟಕದ ಪರಿಶಿಷ್ಟ ಪಂಗಡ ವಿಭಾಗದ ತಾಲೂಕು ಅಧ್ಯಕ್ಷರಾಗಿ ರಾಜಗೊಂಡ ಧನರಾಜ ಮುದಾಳೆ ಅವರನ್ನು ನೇಮಕ ಮಾಡಲಾಗಿದೆ.
ಈ ಕುರಿತು ಜಿಲ್ಲಾ ಕಾಂಗ್ರೆಸ್ ಸಮಿತಿಯ ಪರಿಶಿಷ್ಟ ಪಂಗಡ ವಿಭಾಗದ ಜಿಲ್ಲಾಧ್ಯಕ್ಷ ರಾಕೇಶ ಎನ್. ಕುರಬಖೇಳಗಿ ನೇಮಕಾತಿ ಆದೇಶ ಹೊರಡಿಸಿದ್ದಾರೆ. ರಾಜ್ಯಾಧ್ಯಕ್ಷ ವಿಜಯ ನಾಯ್ಕ್ ಎಂ ಒಪ್ಪಿಗೆಯಂತೆ ಹಾಗೂ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಡಾ. ಭೀಮಸೇನರಾವ ಶಿಂಧೆ ಶಿಫಾರಿಸಿನ ಮೇರೆಗೆ ರಾಮಗೊಂಡ ಮುದಾಳೆ ಅವರನ್ನು ನೇಮಕ ಮಾಡಲಾಗಿದೆ.
ಪಕ್ಷದ ಸಿದ್ಧಾಂತದಂತೆ ನಡೆದುಕೊಳ್ಳುವ ಮೂಲಕ ಪಕ್ಷದ ಅಭಿವೃದ್ಧಿಗೆ ಶ್ರಮಿಸುವಂತೆ ರಾಕೇಶ್ ಎನ್. ತಿಳಿಸಿದ್ದಾರೆ. ಇಂಡಿಯನ್ ಕಾಂಗ್ರೆಸ್ ಬಿಗ್ರೇಡ್ ರಾಜ್ಯಾಧ್ಯಕ್ಷ ಅನಿಲ ನಿರ್ಮಳೆ, ಅನಿಲ ದೇವಕತ್ತೆ, ಮಹೇಶ ಸ್ವಾಮಿ, ರತ್ನಾದೀಪ ಕಸ್ತೂರೆ ಅವರು ಮುದಾಳೆ ನೇಮಕಾತಿಗೆ ಹರ್ಷ ವ್ಯಕ್ತಪಡಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: