ಹೆತ್ತವರ ಮೂಢನಂಬಿಕೆಗೆ ಇಬ್ಬರು ಯುವತಿಯರು ಬಲಿ | ಮಕ್ಕಳನ್ನೇ ಕೊಂದ ತಂದೆ-ತಾಯಿ - Mahanayaka
2:09 AM Wednesday 5 - February 2025

ಹೆತ್ತವರ ಮೂಢನಂಬಿಕೆಗೆ ಇಬ್ಬರು ಯುವತಿಯರು ಬಲಿ | ಮಕ್ಕಳನ್ನೇ ಕೊಂದ ತಂದೆ-ತಾಯಿ

25/01/2021

ಆಂಧ್ರಪ್ರದೇಶ: ಹೆತ್ತವರ ಮೂಢನಂಬಿಕೆಗೆ ಇಬ್ಬರು ಯುವತಿಯರು ಬಲಿಯಾಗಿರುವ ಘಟನೆ  ಚಿತ್ತೂರು ಜಿಲ್ಲೆಯ ಮದನಪಲ್ಲಿಯಲ್ಲಿ ನಡೆದಿದೆ. ಬೆಳೆದು ನಿಂತಿರುವ ಇಬ್ಬರು ಯುವತಿಯರನ್ನು ಹೆತ್ತವರೇ ಹತ್ಯೆ ಮಾಡಿದ್ದಾರೆ.

ಮಧ್ಯಪ್ರದೇಶದ ಭೋಲಾಪ್ ನಲ್ಲಿ ಸ್ನಾತಕೋತ್ತರ ಪದವಿ ಮಾಡುತ್ತಿದ್ದ 22 ವರ್ಷದ ಸಾಯಿ ದಿವ್ಯ ಹಾಗೂ 27 ವರ್ಷದ ಅಲೈಕ್ಯ ಬಿಬಿಎ ಕಲಿಯುತ್ತಿದ್ದು, ಸಾಯಿ ದಿವ್ಯ ಖ್ಯಾತ ಸಂಗೀತಗಾರ ಎ.ಆರ್.ರೆಹಮಾನ್ ಅವರ ಮ್ಯೂಸಿಕ್ ಅಕಾಡೆಮಿಯಲ್ಲಿ ವಿದ್ಯಾರ್ಥಿಯಾಗಿದ್ದರು.

ತಂದೆ ಪುರುಷೋತ್ತಮ್ ನಾಯ್ಡ ಮತ್ತು ತಾಯಿ ಪದ್ಮಜಾ ಇಬ್ಬರು ಕೂಡ ಪ್ರತ್ಯೇಕ ಕಾಲೇಜುಗಳಲ್ಲಿ ಪ್ರಾಂಶುಪಾಲರಾಗಿದ್ದರು. ಇಷ್ಟೊಂದು ವಿದ್ಯಾವಂತರಾಗಿದ್ದರೂ ಕೂಡ, ಇವರ ಮನೆಯಲ್ಲಿ ಮೌಢ್ಯತೆಯ ಆಚರಣೆಯಾಗಿರುವ ಮಾಟ ಮಂತ್ರಗಳು ನಡೆಯುತ್ತಿತ್ತು.

ತಮ್ಮ ಇಬ್ಬರು ಹೆಣ್ಣು ಮಕ್ಕಳು ಮತ್ತೆ ಹುಟ್ಟಿ ಬರುತ್ತಾರೆ ಎಂಬ ನಂಬಿಕೆಯಿಂದ ಇಬ್ಬರು ಮಕ್ಕಳನ್ನು ತಂದೆ, ತಾಯಿಯೇ ಹತ್ಯೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಮದನಪಲ್ಲಿ ಡಿಎಸ್ಪಿ ರವಿ ಮನೋಹರಾಚಾರಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿದ್ದಾರೆ.

ಇತ್ತೀಚಿನ ಸುದ್ದಿ