ಎಲೆಕ್ಷನ್ ಗೆ ನಿಲ್ಲಲು ಮಾತ್ರ ನಯನಾ ಮೋಟಮ್ಮ ಎಸ್ ಸಿ, ಮದುವೆಯಾಗಿದ್ದು ಮಾರ್ವಾಡಿಯನ್ನು: ಕಾಂಗ್ರೆಸ್ ನಲ್ಲಿ ಭಿನ್ನಮತ - Mahanayaka

ಎಲೆಕ್ಷನ್ ಗೆ ನಿಲ್ಲಲು ಮಾತ್ರ ನಯನಾ ಮೋಟಮ್ಮ ಎಸ್ ಸಿ, ಮದುವೆಯಾಗಿದ್ದು ಮಾರ್ವಾಡಿಯನ್ನು: ಕಾಂಗ್ರೆಸ್ ನಲ್ಲಿ ಭಿನ್ನಮತ

mudigere congress
13/01/2023

ಮೂಡಿಗೆರೆ: ಎಲೆಕ್ಷನ್ ಗೆ ನಿಲ್ಲಲು ಮಾತ್ರವೇ ನಯನಾ ಮೋಟಮ್ಮ ಎಸ್ಸಿ ಎಂದು ಹೇಳಿಕೊಳ್ಳುತ್ತಾರೆ. ಆದರೆ ಅವರ ಗಂಡ ಒಬ್ಬ ಮಾರ್ವಾಡಿ, ಅದೂ ಕೂಡ ಬಾಂಬೆಯವರು, ನಯನ ಬಾಂಬೆಯಲ್ಲಿ ಎಲೆಕ್ಷನ್ ಗೆ ನಿಲ್ಲಲಿ, ಮೂಡಿಗೆರೆಯಲ್ಲಿ ಯಾಕೆ ನಿಲ್ಲಬೇಕು ಎಂದು ಕಾಂಗ್ರೆಸ್ ನ ಭಿನ್ನಮತ ತಂಡ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಗೋಣಿಬೀಡು ಹೋಬಳಿಯಲ್ಲಿ ಬಂಡಾಯದ ಸಭೆ ನಡೆಸಿದ ಕೈ ಮುಖಂಡರು ನಯನಾ ಮೋಟಮ್ಮ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಒಂದು ತಿಂಗಳ ಅಂತರದಲ್ಲಿ ಐದು ಸಭೆಗಳನ್ನು ಕೈ ಮುಖಂಡರು ನಡೆಸಿದ್ದು, ಕಾಂಗ್ರೆಸ್ ನ ಹಿರಿಯ ನಾಯಕಿ ಮೋಟಮ್ಮ ಅವರ ಪುತ್ರಿ ನಯನ ಮೋಟಮ್ಮಗೆ ಟಿಕೆಟ್ ನೀಡಬಾರದು ಎಂದು ಒತ್ತಾಯಿಸಿದ್ದಾರೆ.

ಡಿ.ಕೆ.ಶಿವಕುಮಾರ್ ಆಪ್ತ ಬಣದಲ್ಲಿ ಗುರುತಿಸಿಕೊಂಡಿರುವ ನಯನಾ ಮೋಟಮ್ಮಗೆ ಟಿಕೆಟ್ ನೀಡದಿರಲು ವರಿಷ್ಠರಿಗೆ ಮನವಿ ಸಲ್ಲಿಸಲು ಇಲ್ಲಿನ ಕಾಂಗ್ರೆಸ್ ಮುಖಂಡರು ಮುಂದಾಗಿದ್ದಾರೆ. ನಯನ ಮೋಟಮ್ಮಗೆ ಪಕ್ಷ ಟಿಕೆಟ್ ನೀಡಿದರೆ, ಮೂಡಿಗೆರೆಯಲ್ಲಿ ಕಾಂಗ್ರೆಸ್ ಸೋಲುತ್ತದೆ ಎನ್ನುವುದು ಭಿನ್ನಮತ ತಂಡದ ಅಭಿಪ್ರಾಯವಾಗಿದೆ.


Provided by

ಬಂಡಾಯ ಸಭೆಯಲ್ಲಿ  ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸುತ್ತಿರುವ ಕಾಂಗ್ರೆಸ್ ಮುಖಂಡರು, ಗ್ರಾ.ಪಂ ಸದಸ್ಯರು ಭಾಗಿಯಾಗಿದ್ದಾರೆ. ವಿಧಾನಪರಿಷತ್ ಚುನಾವಣೆಯಲ್ಲಿ ಗಾಯತ್ರಿ ಶಾಂತೇಗೌಡರ ವಿರುದ್ಧ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆಂದು ಮೋಟಮ್ಮ ವಿರುದ್ಧ ಕಾರ್ಯಕರ್ತರು ಕಿಡಿಕಾರಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LG00SlXNdBFJ1LFb3E40gL

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ