ಹೈಕಮಾಂಡ್ ಅಂಗಳ ತಲುಪಿದ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಟಿಕೆಟ್ ಕದನ - Mahanayaka

ಹೈಕಮಾಂಡ್ ಅಂಗಳ ತಲುಪಿದ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಟಿಕೆಟ್ ಕದನ

m p kumaraswamy
06/04/2023

ಚಿಕ್ಕಮಗಳೂರು:  ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರ ಟಿಕೆಟ್ ವಿವಾದ ಇದೀಗ ಹೈಕಮಾಂಡ್ ಅಂಗಳ ತಲುಪಿದ್ದು, ಕುಮಾರಸ್ವಾಮಿಗೆ ಟಿಕೆಟ್ ನೀಡದಂತೆ ಬಿಜೆಪಿಯ ಮತ್ತೊಂದು ಬಣ ಹೈಕಮಾಂಡ್ ಗೆ ಮೇಲ್ ಕಳುಹಿಸಿದ್ದಾರೆ.

ಎಂ.ಪಿ.ಕುಮಾರಸ್ವಾಮಿ ಪರ ಹಾಗೂ ವಿರೋಧ ಬಣದಿಂದ ಮೇಲ್ ರಾಜಕೀಯ ಆರಂಭವಾಗಿದ್ದು,  ಪ್ರಧಾನಿ ಮೋದಿ, ಅಮಿತ್ ಶಾ, ನಡ್ಡಾ, ಬಿ.ಎಲ್.ಸಂತೋಷ್ ಗೆ ಪತ್ರ ರವಾನಿಸಲಾಗಿದೆ.

ಎಂ.ಪಿ.ಕುಮಾರಸ್ವಾಮಿ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಕ್ಷೇತ್ರದ ಬಿಜೆಪಿ ಶಾಸಕರಾಗಿದ್ದು, ಇವರ ಪರ ಹಾಗೂ ವಿರೋಧವಾಗಿ ಸಾವಿರಾರು ಮೇಲ್ ಗಳು ಹೈಕಮಾಂಡ್ ಗೆ ಹೋಗಿದೆ.

ಮೂಡಿಗೆರೆಯಲ್ಲಿ ಬಿಜೆಪಿ ಬಣ ರಾಜಕೀಯ ದಿನದಿಂದ ದಿನಕ್ಕೆ ತಾರಕಕ್ಕೇರಿದ್ದು, ಎಂ.ಪಿ.ಕುಮಾರಸ್ವಾಮಿ ವಿರುದ್ಧ ಪಕ್ಷದಲ್ಲಿ ಮತ್ತೊಂದು ಬಣ ಸೃಷ್ಟಿಯಾಗಿದ್ದು, ಇದೀಗ ಇವರ ನಡುವೆ ಪ್ರಬಲ ಪೈಪೋಟಿ ಆರಂಭವಾಗಿದೆ. ಮೂಡಿಗೆರೆ ಕ್ಷೇತ್ರದ ಬಣ ರಾಜಕೀಯ ರಾಜ್ಯ ಮುಖಂಡರ ಹಂತದಿಂದ ಇದೀಗ ರಾಷ್ಟ್ರ ನಾಯಕರ ಹಂತಕ್ಕೆ ತಲುಪಿದ್ದು, ಎಲ್ಲಿ ಕೊನೆಗೊಳ್ಳುವುದೋ ಕಾದು ನೋಡಬೇಕಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ