ಮುಖಕ್ಕೆ ಹಾಕುವ ಮಾಸ್ಕ್ ನ್ನು ಬಿಜೆಪಿ ಸಚಿವ ಹಾಕಿದ್ದೆಲ್ಲಿಗೆ ಗೊತ್ತಾ? | ಫೋಟೋ ವೈರಲ್
ನವದೆಹಲಿ: ಕೊರೊನಾ ತಡೆಗೆ ಮಾರ್ಗಸೂಚಿಗಳನ್ನು ಹಾಕುವ ಸರ್ಕಾರದ ಪ್ರತಿನಿಧಿಗಳೇ ಕೊರೊನಾ ನಿಯಮಗಳನ್ನು ಉಲ್ಲಂಘಿಸುತ್ತಿರುವುದು ಆಗಾಗ ಸುದ್ದಿಯಾಗುತ್ತಿರುತ್ತದೆ. ಆದರೆ. ಇಲ್ಲೊಬ್ಬ ಬಿಜೆಪಿ ಸಚಿವ, ಮುಖಕ್ಕೆ ಹಾಕುವ ಮಾಸ್ಕ್ ನ್ನು ಕಾಲಿನ ಹೆಬ್ಬೆರಳಿನಲ್ಲಿ ಸಿಕ್ಕಿಸಿಕೊಂಡು ಕುಳಿತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಉತ್ತರಾಖಂಡದ ಬಿಜೆಪಿ ಸರ್ಕಾರದ ಸಚಿವ ಸ್ವಾಮಿ ಯತೀಶ್ವರಾನಂದ ಈ ವಿಚಿತ್ರ ವರ್ತನೆ ತೋರಿದ್ದು, ಯಾವುದೋ ಸಭೆಯ ವೇಳೆ ಅವರು ಈ ವರ್ತನೆ ತೋರಿದ್ದರು ಎಂದು ಹೇಳಲಾಗಿದ್ದು, ಇವರ ಜೊತೆಗೆ ಇನ್ನು ನಾಲ್ವರು ಕೂಡ ಇದ್ದು, ಅವರು ಕೂಡ ಮಾಸ್ಕ್ ಧರಿಸಿಲ್ಲ.
ರಸ್ತೆ ಬದಿಯಲ್ಲಿ ಮಾಸ್ಕ್ ಧರಿಸದ ಬಡವರಿಗೆ ಹಿಗ್ಗಾಮುಗ್ಗ ಥಳಿಸಿ, ನೀತಿ ಪಾಠ ಹೇಳಿ, ದಂಡ ವಿಧಿಸುವ ಸರ್ಕಾರದ ಪ್ರತಿನಿಧಿಗಳಾಗಿರುವ ಸಚಿವರು ಮಾತ್ರ ತಮಗೆ ಇಷ್ಟ ಬಂದಂತೆ ವರ್ತಿಸಬಹುದೇ? ಎಂದು ಈ ಘಟನೆಯ ವಿರುದ್ಧ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ಆಡಳಿತ ಪಕ್ಷದ ನಿಷ್ಠೆ ಇದಾಗಿದ್ದು, ಬಳಿಕ ಮಾಸ್ಕ್ ಧರಿಸದ್ದಕ್ಕೆ ಬಡವರನ್ನು ಶಿಕ್ಷಿಸುತ್ತಾರೆ. ಕೋವಿಡ್ ಎರಡನೇ ಅಲೆಯಲ್ಲಿ ಲಕ್ಷಾಂತರ ಮಂದಿ ಜೀವ ಕಳೆದುಕೊಂಡಾಗ ಜನರಿಗೆ ಯಾವ ಸಂದೇಶವನ್ನು ನೀಡಲು ಬಯಸುತ್ತಾರೆ ಎಂದು ಉತ್ತರಾಖಂಡದ ಕಾಂಗ್ರೆಸ್ ವಕ್ತಾರೆ ಗರೀಮಾ ಮೆಹ್ರಾ ದಸೌನಿ, ಈ ಚಿತ್ರವನ್ನು ಲಗತ್ತಿಸಿ ಟ್ವೀಟ್ ಮಾಡಿದ್ದಾರೆ.
ಇನ್ನಷ್ಟು ಸುದ್ದಿಗಳು
ಅಶ್ಲೀಲ ಚಿತ್ರಗಳನ್ನು ವೀಕ್ಷಿಸುತ್ತಿರುವವರಿಗೆ ಬಿಗ್ ಶಾಕ್ ನೀಡಿದ ಪೊಲೀಸರು!
ಜೊತೆ ಜೊತೆಯಲಿ ಧಾರಾವಾಹಿ ವೀಕ್ಷಕರಿಗೆ ಸಿಹಿ ಸುದ್ದಿ ನೀಡಿದ ಅನು ಸಿರಿಮನೆ
ಚರ್ಚ್ ಗೆ ಸೇರಿದ ಜಾಗದಲ್ಲಿ ಹಿಂದೂ ದಂಪತಿಯ ಅಂತ್ಯಕ್ರಿಯೆ | ಸಹೋದರತೆ ಸಾರಿದ ಚರ್ಚ್
ಜಿ.ಪಂ.-ತಾ.ಪಂ. ಚುನಾವಣೆ ಯಾವಾಗ? | ಬಸವರಾಜ್ ಬೊಮ್ಮಾಯಿ ಹೇಳಿದ್ದೇನು?
ಕೇರಳದಲ್ಲಿ ನಾಲ್ವರು ಮಹಿಳೆಯರ ಸಹಿತ ಮತ್ತೆ 5 ಮಂದಿಯಲ್ಲಿ ಝಿಕಾ ವೈರಸ್ ಪತ್ತೆ!
ಭಾರೀ ಪ್ರವಾಹದ ನಡುವೆಯೇ ಬಸ್ ನ್ನು ಸೇತುವೆ ದಾಟಿಸಿದ ಬಸ್ ಚಾಲಕ!