ನಿಶ್ಚಿತಾರ್ಥ ಪಾರ್ಟಿಯಲ್ಲಿ ಸ್ನೇಹಿತರಿಂದಲೇ ಯುವತಿಯ ಸಾಮೂಹಿಕ ಅತ್ಯಾಚಾರ - Mahanayaka
2:11 PM Wednesday 15 - January 2025

ನಿಶ್ಚಿತಾರ್ಥ ಪಾರ್ಟಿಯಲ್ಲಿ ಸ್ನೇಹಿತರಿಂದಲೇ ಯುವತಿಯ ಸಾಮೂಹಿಕ ಅತ್ಯಾಚಾರ

16/11/2020

ಮುಂಬೈ: ನಿಶ್ಚಿತಾರ್ಥ ಪಾರ್ಟಿಯಲ್ಲಿ ಭಾಗವಹಿಸಿದ್ದ ಯುವತಿಗೆ ಮದ್ಯ ಕುಡಿಸಿ ಬಳಿಕ ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ಮುಂಬೈನ ಹೊಟೇಲೊಂದರಲ್ಲಿ ನಡೆದಿದ್ದು, ಯುವತಿಯ  ಸ್ನೇಹಿತರೇ ಈ ದುಷ್ಕೃತ್ಯ ಎಸಗಿದ್ದಾರೆ.

ಮುಂಬೈನ ಅಂಧೇರಿ-ಕುರ್ಲಾ ರಸ್ತೆಯ ಹೋಟೆಲೊಂದರಲ್ಲಿ ಈ ಕೃತ್ಯ ಎಸಗಲಾಗಿದೆ. ಸ್ನೇಹಿತರಾದ ಅವಿನಾಶ್ ಪಂಕೇಕರ್ (28), ಶಿಶಿರ್ (27) ಮತ್ತು ತೇಜಸ್ (25) ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಸಂತ್ರಸ್ತ ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.


ADS

ನಿಶ್ಚಿತಾರ್ಥ ಪಾರ್ಟಿಯ ಬಳಿಕ ಎಲ್ಲರೂ ಹೊರಟು ಹೋಗಿದ್ದಾರೆ. ಈ ಸಂದರ್ಭವನ್ನು ನೋಡಿಕೊಂಡು ಆರೋಪಿಗಳು ಈ ಕೃತ್ಯ ಎಸಗಿದ್ದಾರೆ. ಘಟನೆ ನಡೆದ ತಕ್ಷಣ ಯುವತಿ ಈ ವಿಚಾರವನ್ನು ಕುಟುಂಬಸ್ಥರಿಗೆ ತಿಳಿಸಿರಲಿಲ್ಲ, ಆ ಬಳಿಕ ಕುಟುಂಬಕ್ಕೆ ಮಾಹಿತಿ ನೀಡಿದ್ದಾಳೆ.

ಯುವತಿಯನ್ನು ಇಲ್ಲಿನ ಕೂಪರ್ ಆಸ್ಪತ್ರೆಗೆ ದಾಖಲಿಸಿ, ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಸದ್ಯ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರಿಗಾಗಿ ಪೊಲೀಸರು ಶೋಧ ಆರಂಭಿಸಿದ್ದಾರೆ.

ಇತ್ತೀಚಿನ ಸುದ್ದಿ