ಮುಂಬೈ ಹಾಸ್ಟೆಲ್ ಅತ್ಯಾಚಾರ & ಕೊಲೆ ಪ್ರಕರಣ: ಕಿರುಕುಳದ ಬಗ್ಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ: ಸಂತ್ರಸ್ತೆಯ ತಂದೆ ಅಳಲು
ಮಹಾರಾಷ್ಟ್ರದ ರಾಜಧಾನಿ ಮುಂಬೈನ ಮರೀನ್ ಡ್ರೈವ್ ನಲ್ಲಿರುವ ಹಾಸ್ಟೆಲ್‌ನಲ್ಲಿ 21 ವರ್ಷದ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ. ಅತ್ಯಾಚಾರ ಮತ್ತು ಕೊಲೆ ಪ್ರಕರಣ ನಡೆಯುವ ಕೆಲವು ದಿನಗಳ ಮೊದಲು ಸಂತ್ರಸ್ತೆ ಕಿರುಕುಳದ ಬಗ್ಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬ ಮಾಹಿತಿ ಹೊರಬಿದ್ದಿದೆ.
ಈ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಮೃತ ವಿದ್ಯಾರ್ಥಿನಿಯ ತಂದೆ, ತನ್ನ ಮಗಳು ಹಾಸ್ಟೆಲ್‌ನಲ್ಲಿ ತಾನು ಎದುರಿಸುತ್ತಿರುವ ಕಿರುಕುಳದ ಬಗ್ಗೆ ನೀಡಿದ ದೂರಿನ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದಿದ್ದಾರೆ.
15 ದಿನಗಳ ಹಿಂದೆ ನನ್ನ ಮಗಳು ಕಿರುಕುಳದ ಬಗ್ಗೆ ದೂರು ನೀಡಿದಾಗ ಕೂಡಲೇ ಕ್ರಮ ತೆಗೆದುಕೊಳ್ಳಬೇಕಿತ್ತು. ರಕ್ಷಕ್ ಹಿ ಭಕ್ಷಕ್ ಹೈ ಯಹಾ ಪರ್ (ಇಲ್ಲಿ ರಕ್ಷಕರೇ ಪರಭಕ್ಷಕರಾಗಿ ಮಾರ್ಪಟ್ಟಿದ್ದಾರೆ) ಎಂದು ಸಂತ್ರಸ್ತೆಯ ತಂದೆ ಕಿಡಿಕಾರಿದ್ದಾರೆ.
ಇನ್ನು ತನ್ನ ಮಗಳ ಸಾವಿನ ನಂತರ ಸಮಿತಿಯನ್ನು ರಚಿಸುವುದರಿಂದ ಏನು ಪ್ರಯೋಜನವಿದೆ..? ಎಂದು ಅವರು ಪ್ರಶ್ನಿಸಿದ್ದಾರೆ. ನಾನು ಜೂನ್ ಐದರಂದು ತನ್ನ ಮಗಳೊಂದಿಗೆ ಕೊನೆಯದಾಗಿ ಮಾತನಾಡಿದ್ದೆ ಎಂದು ಅವರು ಭಾವುಕರಾಗಿ ನುಡಿದರು.
ಕಳೆದ ಎರಡೂವರೆ ವರ್ಷಗಳಲ್ಲಿ ನಾನು ಇದೇ ಮೊದಲ ಬಾರಿಗೆ ಮಗಳುದ್ದ ಹಾಸ್ಟೆಲ್ ಗೆ ಹೋಗಿದೆ. ಆಗ ಅಲ್ಲಿನ ಪರಿಸ್ಥಿತಿ ತುಂಬಾ ಕೆಟ್ಟದಾಗಿತ್ತು ಎಂದು ಸಂತ್ರಸ್ತೆಯ ತಂದೆ ಹೇಳಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw