ಪತ್ನಿ ಜೊತೆಗೆ ಅನುಚಿತವಾಗಿ ವರ್ತಿಸಿದ್ದಕ್ಕೆ ಗರಂ: ಬಾಮೈದನನ್ನು ಪೀಸ್ ಪೀಸ್ ಮಾಡಿ ಕೊಂದೇಬಿಟ್ಟ; ಕಿಚನ್ ರೂಮಲ್ಲಿ ಪತ್ತೆಯಾಯ್ತು ಡೆಡ್ ಬಾಡಿ..! - Mahanayaka
5:16 PM Saturday 21 - September 2024

ಪತ್ನಿ ಜೊತೆಗೆ ಅನುಚಿತವಾಗಿ ವರ್ತಿಸಿದ್ದಕ್ಕೆ ಗರಂ: ಬಾಮೈದನನ್ನು ಪೀಸ್ ಪೀಸ್ ಮಾಡಿ ಕೊಂದೇಬಿಟ್ಟ; ಕಿಚನ್ ರೂಮಲ್ಲಿ ಪತ್ತೆಯಾಯ್ತು ಡೆಡ್ ಬಾಡಿ..!

31/08/2023

ತನ್ನ ಪತ್ನಿ ಜೊತೆ ಅನುಚಿತವಾಗಿ ವರ್ತಿಸುತ್ತಿದ್ದ 17 ವರ್ಷದ ಬಾಮೈದನನ್ನ ಕೊಂದು ದೇಹವನ್ನು ಪೀಸ್‌ ಪೀಸ್‌ ಮಾಡಿ ಕಿಚನ್‌ನಲ್ಲಿಟ್ಟಿದ್ದ ವ್ಯಕ್ತಿಯನ್ನು ಮುಂಬೈನ ಆರ್‌ಸಿಎಫ್‌ ಪೊಲೀಸರು ಚೆಂಬೂರ್‌ನಲ್ಲಿ ಬಂಧಿಸಿದ್ದಾರೆ. ಶಫೀಕ್ ಶೇಖ್‌, ಆರೋಪಿ. ಹೆಂಡತಿಯ ಮನೆಯ ದತ್ತು ಪುತ್ರ ಅಪ್ರಾಪ್ತನು ಸದಾ ಶಫೀಕ್‌ ಪತ್ನಿ ಮತ್ತು ಮಗಳನ್ನ ರೇಗಿಸುತ್ತಾ ಅನುಚಿತವಾಗಿ ವರ್ತಿಸುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ಶೇಕ್‌ ಸಾಕಷ್ಟು ಬಾರಿ ಎಚ್ಚರಿಕೆ ನೀಡಿದ್ದರೂ ಆತನಿಲ್ಲದ ಸಮಯದಲ್ಲಿ ಪತ್ನಿ ಮತ್ತು ಮಗಳಿಗೆ ಅಪ್ರಾಪ್ತ ಹಿಂಸೆ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಶೇಕ್‌, ಆ ಯುವಕನನ್ನ ಮನೆಗೆ ಕರೆದು ಎಚ್ಚರಿಕೆ ನೀಡಿದ್ದಾನೆ. ಈ ಮಧ್ಯೆ ಇಬ್ಬರ ನಡುವೆ ಗಲಾಟೆ ಆರಂಭವಾಗಿದೆ. ಸಿಟ್ಟಿನ ಭರದಲ್ಲಿ ಯುವಕನ್ನ ಚೂರಿಯಿಂದ ಚುಚ್ಚಿ ಕೊಂದು ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಅಡುಗೆ ಮನೆಯಲ್ಲಿ ಅಡಗಿಸಿಟ್ಟಿದ್ದ. ಜೊತೆಗೆ ಬೇರೆಡೆ ಮೃತದೇಹವನ್ನು ಸಾಗಿಸಲು ಪ್ಲ್ಯಾನ್‌ ಕೂಡಾ ಮಾಡಿದ್ದ.

ಮನೆಯಿಂದ ಅಪ್ರಾಪ್ತ ಯುವಕ ಕಾಣೆಯಾಗಿರುವ ಹಿನ್ನೆಲೆಯಲ್ಲಿ ಹುಡುಕಾಟ ಆರಂಭಿಸಲಾಗಿತ್ತು. ಪೊಲೀಸರಿಗೆ ಈ ಬಗ್ಗೆ ದೂರು ಕೂಡ ನೀಡಲಾಗಿತ್ತು. ಜೊತೆಗೆ ಮನೆಗೆ ಬಂದ ಶೇಕ್‌ ಪತ್ನಿಗೆ ಅಡುಗೆ ಮನೆ ಬಾಗಿಲು ತೆಗೆಯಬಾರದೆಂದು ತಾಕೀತು ಮಾಡಲಾಗಿತ್ತು. ಯುವಕನ ಹುಡುಕಾಟಕ್ಕೆ ಬಂದ ಪೊಲೀಸರಿಗೆ ಕೊನೆಯದಾಗಿ ಆತ ಶೇಕ್‌ ಮನೆಗೆ ಬಂದಿದ್ದು ತಿಳಿದು ಮನೆಯಲ್ಲಿ ಶೋಧ ನಡೆಸಿದಾಗ ಮೃತದೇಹ ಪತ್ತೆಯಾಗಿದೆ. ಶೇಕ್‌ನನ್ನ ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದಾಗ ಆರೋಪಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.


Provided by

ಇತ್ತೀಚಿನ ಸುದ್ದಿ