ಮದುವೆಯಾಗಿ  ತಿಂಗಳು ಕಳೆಯುವ ಮೊದಲೇ ಪತಿಯಿಂದ ಘೋರ ಕೃತ್ಯ! - Mahanayaka

ಮದುವೆಯಾಗಿ  ತಿಂಗಳು ಕಳೆಯುವ ಮೊದಲೇ ಪತಿಯಿಂದ ಘೋರ ಕೃತ್ಯ!

14/01/2021

ಮುಂಬೈ:  ತಿಂಗಳ ಹಿಂದೆಯಷ್ಟೇ 26 ವರ್ಷದ ಮಹಿಳೆಯನ್ನು ವಿವಾಹವಾಗಿದ್ದ ವ್ಯಕ್ತಿ, ಇದೀಗ ಆಕೆಯನ್ನು ರೈಲಿನಿಂದ ಕೆಳಕ್ಕೆ ತಳ್ಳಿ ಅಮಾನುಷವಾಗಿ ಹತ್ಯೆ ನಡೆಸಿದ ಘಟನೆ  ಛೇಂಬರ್ ಮತ್ತು ಗೋವಾಂ‌ದಿ ರೈಲ್ವೆ ನಿಲ್ದಾಣಗಳ ಮಾರ್ಗಮಧ್ಯದಲ್ಲಿ ನಡೆದಿದೆ.

31 ವರ್ಷದ ಆರೋಪಿ  ಹಾಗೂ ಸಂತ್ರಸ್ತ ಮಹಿಳೆ ಇಬ್ಬರು ಕೂಡ ಕೂಲಿ ಕಾರ್ಮಿಕರಾಗಿದ್ದರು. ಮಹಿಳೆ ಇದಕ್ಕೂ ಮೊದಲು ಒಂದು ವಿವಾಹವಾಗಿದ್ದು, ಆಕೆಗೆ 7 ವರ್ಷದ ಮಗು ಇದೆ.  ಕಳೆದ ತಿಂಗಳಷ್ಟೆ ಆರೋಪಿಯು ಈ ಮಹಿಳೆಯನ್ನು ವಿವಾಹವಾಗಿದ್ದು, ಯಾವುದೋ ವಿಚಾರಕ್ಕೆ ಸಂಬಂಧಿಸಿದಂತೆ ಜಗಳ ನಡೆದು ಚಲಿಸುತ್ತಿದ್ದ ರೈಲಿನಿಂತ ಪತ್ನಿಯನ್ನು ಆರೋಪಿ ಕೆಳಕ್ಕೆ ತಳ್ಳಿದ್ದಾನೆ.

ಮಹಿಳೆ ಕೆಳಕ್ಕೆ ಬೀಳುತ್ತಿದ್ದಂತೆಯೇ ಸಹ ಪ್ರಯಾಣಿಕರು ರೈಲನ್ನು ತಡೆದು ನಿಲ್ಲಿಸಿದ್ದು,  ಘಟನಾ ಸ್ಥಳಕ್ಕೆ ಬಂದು ನೋಡುವಷ್ಟರಲ್ಲಿ ಮಹಿಳೆ  ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತಾದರೂ ಅದಾಗಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.


Provided by

ಘಟನೆ ಸಂಬಂಧ ಆರೋಪಿ ಪತಿಯನ್ನು ಪೊಲೀಸರು ಬಂಧಿಸಿದ್ದು, ಆರೋಪಿಯ ವಿರುದ್ಧ ವಿವಿಧ ಪ್ರಕರಣಗಳಡಿಯಲ್ಲಿ ಕೇಸು ದಾಖಲಿಸಿಕೊಂಡು, ತನಿಖೆ ಮುಂದುವರಿಸಿದ್ದಾರೆ.

ಇತ್ತೀಚಿನ ಸುದ್ದಿ