ಜನಸಂಖ್ಯೆ ನಿಯಂತ್ರಿಸಲು ಮುಂದಿನ 20 ವರ್ಷ ವಿವಾಹವನ್ನೇ ನಿಷೇಧಿಸಿ: ಯೋಗಿಗೆ ತಿರುಗೇಟು ನೀಡಿದ ಸಂಸದ
ಉತ್ತರ ಪ್ರದೇಶ: ಉತ್ತರ ಪ್ರದೇಶ ಸರ್ಕಾರ ಜಾರಿಗೆ ತಂದಿರುವ ಜನಸಂಖ್ಯಾ ನಿಯಂತ್ರಣ ಮಸೂದೆ, ಮುಂದಿನ ವರ್ಷ ರಾಜ್ಯದಲ್ಲಿ ನಡೆಯಲಿರುವ ಬಿಜೆಪಿಯ ಚುನಾವಣಾ ಪ್ರಚಾರದ ಭಾಗವಾಗಿದೆ ಎಂದು ಸಮಾಜವಾದಿ ಪಕ್ಷದ ಸಂಸದ ಶಾಫೀಕ್ ಉರ್ ರೆಹಮಾನ್ ಬಾರಕ್ ಆರೋಪಿಸಿದ್ದಾರೆ.
ಇನ್ನೂ ಯೋಗಿ ಸರ್ಕಾರದ ಚುನಾವಣಾ ತಂತ್ರವನ್ನು ವ್ಯಂಗ್ಯ ಮಾಡಿರುವ ಅವರು, ಏರುತ್ತಿರುವ ಜನಸಂಖ್ಯೆಯನ್ನು ನಿಯಂತ್ರಿಸಬೇಕೆಂದರೆ ರಾಜ್ಯ ಸರ್ಕಾರ ವಿವಾಹಗಳನ್ನೇ ನಿಷೇಧಿಸಬೇಕು ಎಂದು ವ್ಯಂಗ್ಯವಾಡಿದ್ದಾರೆ.
ಜನಸಂಖ್ಯೆ ನಿಯಂತ್ರಿಸಲು ವಿವಾಹ ನಿಷೇಧಿಸುವುದೇ ಉತ್ತಮ. ಮುಂದಿನ 20 ವರ್ಷಗಳವರೆಗೆ ಯಾರೂ ಮದುವೆಯಾಗಬಾರದು ಎಂದು ಕಾನೂನು ತಂದರಾಯಿತು. ಆಗ ಮಕ್ಕಳ ಜನನದ ವಿಚಾರವೇ ಬರುವುದಿಲ್ಲವಲ್ಲ ಎಂದು ಹೇಳುವ ಮೂಲಕ ಉತ್ತರ ಪ್ರದೇಶ ಸರ್ಕಾರದ ಜನಸಂಖ್ಯಾ ನೀತಿಯನ್ನು ಟೀಕಿಸಿದ್ದಾರೆ.
ಚುನಾವಣೆ ಪ್ರಚಾರಕ್ಕಾಗಿ ಜಾರಿಗೆ ತಂದಿರುವ ಮಸೂದೆ. ಅವರು ಎಲ್ಲ ವಿಚಾರವನ್ನೂ ರಾಜಕೀಯ ದೃಷ್ಟಿಯಿಂದಲೇ ನೋಡುತ್ತಾರೆ. ಆ ಪಕ್ಷದವರು ಕೈಗೊಳ್ಳುವ ನಿರ್ಧಾರಗಳು ಚುನಾವಣೆ ಗೆಲ್ಲುವ ಉದ್ದೇಶವನ್ನು ಹೊಂದಿರುತ್ತವೆಯೇ ಹೊರತು ಜನರ ಹಿತವನ್ನು ಒಳಗೊಂಡಿರುವುದಿಲ್ಲ ಎಂದು ಆರೋಪಿಸಿದ್ದಾರೆ.
ಇನ್ನಷ್ಟು ಸುದ್ದಿಗಳು:
ಜನಸಂಖ್ಯೆಯ ಹೆಚ್ಚಳ ಅಸಮಾನತೆಗೆ ಕಾರಣ | ಯೋಗಿ ಆದಿತ್ಯನಾಥ
ಗೋಮಾಂಸ ತಿನ್ನುವವರ ಜೊತೆಗೆ ನಾವು ಡಿ ಎನ್ ಎ ಹಂಚಿಕೊಳ್ಳುವುದಿಲ್ಲ | ವಿಎಚ್ ಪಿ ಸದಸ್ಯೆ ಸಾಧ್ವಿ ಪ್ರಾಚಿ
ಶೋಭಾ ಕರಂದ್ಲಾಜೆ ನಿಸ್ಸಂದೇಹವಾಗಿ ರೈತರ ಸಂಕಟಗಳಿಗೆ ಸ್ಪಂದಿಸಲಿದ್ದಾರೆ | ಯಡಿಯೂರಪ್ಪ ವಿಶ್ವಾಸ
ವಿಶ್ವನಾಥ್ ಭಟ್ ಎಂಬಾತನ ಮನೆಯಲ್ಲಿ ಜೀತಪದ್ಧತಿ!? | 10 ಮಕ್ಕಳ ರಕ್ಷಿಸಿದ ಅಧಿಕಾರಿಗಳು