ಶಿಕಾರಿಪುರದಲ್ಲಿ ವಿಜಯೇಂದ್ರ ರಾಜರಾಜೇಶ್ವರಿ ನಗರದಲ್ಲಿ‌ ಮುನಿರತ್ನ ಹರಸಾಹಸ - Mahanayaka

ಶಿಕಾರಿಪುರದಲ್ಲಿ ವಿಜಯೇಂದ್ರ ರಾಜರಾಜೇಶ್ವರಿ ನಗರದಲ್ಲಿ‌ ಮುನಿರತ್ನ ಹರಸಾಹಸ

vijayendra munirathna
13/05/2023

ಬೆಂಗಳೂರು / ಶಿವಮೊಗ್ಗ : ರಾಜ್ಯ ವಿಧಾನಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಭಾಗಶಃ ಪೂರ್ಣಗೊಂಡಿದ್ದು ಈಗಾಗಲೇ ಸಾಕಷ್ಟು ಅಭ್ಯರ್ಥಿಗಳ ಹಣೆ ಬರಹ ಬಯಲಾಗಿದೆ. ಆರ್​ ಆರ್​ ನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಬಹಳ ಕಷ್ಟಪಟ್ಟು ಗೆಲುವು ಸಾಧಿಸಿದ್ದು ಮತದಾನ ಎಣೆಕೆಯಲ್ಲಿ‌ ಕಂಡುಬಂದಿತು.


Provided by

ಬೆಳಗ್ಗೆಯಿಂದ ಕಾಂಗ್ರೆಸ್​ ಅಭ್ಯರ್ಥಿ ಕುಸುಮಾ ವಿರುದ್ಧ ಹಿನ್ನಡೆ ಅನುಭವಿಸಿದ್ದ ಮುನಿರತ್ನ ಕೊನೆಯ ಸುತ್ತಿನ ಮತ ಎಣಿಕೆ ವೇಳೆ 12 ಸಾವಿರ ಮತಗಳ ಅಂತರದಿಂದ ಪ್ರಯಾಸದ ಗೆಲುವು ಕಂಡಿದ್ದಾರೆ. ಈ ಮೂಲಕ ಮೊದಲ ಬಾರಿಗೆ ಚುನಾವಣಾ ಕಣಕ್ಕೆ ಇಳಿದಿದ್ದ ಕುಸುಮಾ ಮನಿರತ್ನಗೆ ಟಫ್​ ಫೈಟ್​ ಕೊಟ್ಟಂತಾಗಿದೆ.

ಇನ್ನು ಶಿಕಾರಿಪುರ ಕ್ಷೇತ್ರದಲ್ಲಿ ಯಡಿಯೂರಪ್ಪ ಕ್ಷೇತ್ರತ್ಯಾಗ ವರ್ಕೌಟ್​ ಆಗಿದೆ. 11 ಸಾವಿರ ಮತಗಳ ಅಂತರದಲ್ಲಿ ಬಿವೈ ವಿಜಯೇಂದ್ರ ಗೆಲುವು ದಾಖಲಿಸುವ ಮೂಲಕ ಶಿಕಾರಿಪುರದ ನೂತನ ಶಾಸಕ ಎನಿಸಿದ್ದಾರೆ.


Provided by

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ