ಕೊರೊನಾದಿಂದ ಮೃತಪಟ್ಟ ಮಹಿಳೆಯ ಮೈಮೇಲಿದ್ದ ಚಿನ್ನಾಭರಣ ಕಳವು! - Mahanayaka

ಕೊರೊನಾದಿಂದ ಮೃತಪಟ್ಟ ಮಹಿಳೆಯ ಮೈಮೇಲಿದ್ದ ಚಿನ್ನಾಭರಣ ಕಳವು!

corona
25/04/2021

ಚಿಕ್ಕಮಗಳೂರು: ಕೊರೊನಾದಿಂದ ಸತ್ತವರ ಮೃತದೇಹದ ಪಕ್ಕವೂ ಸುಳಿಯದ ಜನ ಕೊರೊನಾದಿಂದ ಮೃತಪಟ್ಟವರ ಮೃತದೇಹದ ಮೇಲಿದ್ದ ಚಿನ್ನಾಭರಣ ಇದ್ದರೆ, ಕೊರೊನಾ ಭಯವೂ ಇಲ್ಲದೇ ದೋಚುತ್ತಾರೆ. ಹೌದು ಇಂತಹದ್ದೊಂದು ಅಮಾನವೀಯ ಘಟನೆ ಚಿಕ್ಕಗಳೂರಿನಿಂದ ವರದಿಯಾಗಿದೆ.


Provided by

ಚಿಕ್ಕಮಗಳೂರು ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತ ಮಹಿಳೆಯ ಮೈಮೇಲಿದ್ದ ಚಿನ್ನಾಭರಣಗಳನ್ನು ಕಳವು ಮಾಡಿರುವ ಆರೋಪ ಕೇಳಿ ಬಂದಿದ್ದು, ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಕಡೂರು ತಾಲೂಕಿನ ಯಳವರಟ್ಟಿ ಗ್ರಾಮದ ಮಹಿಳೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದರು.

ಅವರ ಮೈ ಮೇಲೆ ಸುಮಾರು 50 ಗ್ರಾಂ ಮಾಂಗಲ್ಯ ಸರವನ್ನು ಅಪಹರಿಸಲಾಗಿದೆ. ಮೃತ ಮಹಿಳೆ ಕುಟುಂಬದವರು ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಈ ಕುರಿತಾಗಿ ದೂರು ನೀಡಿದ್ದಾರೆ ಎನ್ನಲಾಗಿದೆ.


Provided by

ಇತ್ತೀಚಿನ ಸುದ್ದಿ