ಅಪಘಾತದಲ್ಲಿ ಮೃತಪಟ್ಟ ಸಂಬಂಧಿಯನ್ನು ನೋಡಲು ಬರುತ್ತಿದ್ದ ವ್ಯಕ್ತಿಯೂ ಅಪಘಾತಕ್ಕೆ ಬಲಿ!
ಪುಂಜಾಲಕಟ್ಟೆ: ಅಪಘಾತದಿಂದ ಮೃತಪಟ್ಟಿದ್ದ ವ್ಯಕ್ತಿಯನ್ನು ನೋಡಲು ಆಗಮಿಸುತ್ತಿದ್ದ ಸಂಬಂಧಿಕರೊಬ್ಬರು ಲಾರಿ ಡಿಕ್ಕಿಯಾಗಿ ಸಾವನ್ನಪ್ಪಿದ ಘಟನೆ ಕುಪ್ಪೆಟ್ಟಿಯ ಹುಣ್ಸೆಕಟ್ಟೆ ಪಿಲಿಗೂಡು ನಲ್ಲಿ ನಡೆದಿದೆ.
ಮೇಲಿನಪೇಟೆಯ ಶಾರಾದ ಮಂಟಪದ ಇಂದು ಬೆಳಗ್ಗೆ ಬಳಿ ಬೈಕ್ – ಬೈಕ್ ನಡುವೆ ಅಪಘಾತ ನಡೆದು ಕಾಲೇಜ್ ವಿದ್ಯಾರ್ಥಿ ಕರಾಯದ ಮಹಮ್ಮದ್ ಶಫೀಕ್(20) ಸಾವನ್ನಪ್ಪಿದ್ದು, ಈ ವಿಚಾರ ತಿಳಿದು ಸಂಬಂಧಿ ಕಕ್ಕೆಪದವು ನಿವಾಸಿ ತುಂಬೆಯ ಐಟಿಐ ವಿದ್ಯಾರ್ಥಿ ಮಹಮ್ಮದ್ ಸಫಾನ್(20) ಬೈಕ್ ನಲ್ಲಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಬರುತ್ತಿದ್ದರು.
ಈ ವೇಳೆ ಕುಪ್ಪೆಟ್ಟಿಯ ಹುಣ್ಸೆಕಟ್ಟೆ ಪಿಲಿಗೂಡು ನಲ್ಲಿ ಸಫಾನ್ ಬೈಕ್ ಗೆ ಟಿಪ್ಪರ್ ವಾಹನ ಡಿಕ್ಕಿ ಹೊಡೆದಿದೆ. ಈ ವೇಳೆ ಬೈಕ್ ನಲ್ಲಿದ್ದ ಸವಾರ ಮಹಮ್ಮದ್ ಸಫಾನ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು , ಟಿಪ್ಪರ್ ವಾಹನ ಮತ್ತು ಚಾಲಕ ಪರಾರಿಯಾಗಿದ್ದಾನೆ.
ಸ್ಥಳಕ್ಕೆ ಪುತ್ತೂರು ಸಂಚಾರಿ ಪೊಲೀಸರು ಪರಿಶೀಲನೆ ನಡೆಸಿದ್ದು ,ಟಿಪ್ಪರ್ ವಾಹನಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇನ್ನೂ ಘಟನಾ ಸ್ಥಳದಲ್ಲಿ ಜನ ಜಮಾಯಿಸಿದ್ದು ಪ್ರತಿಭಟನೆ ನಡೆಸುತ್ತಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka