ಮೂರ್ತಿ ಬಿಟ್ಟರೆ ಬೇರೆ ಯಾರೂ ನನಗೆ ತಾಳಿ ಕಟ್ಟದಿರಲಿ: ದೇವರಿಗೆ ಯುವತಿ ಪತ್ರ

ಚಾಮರಾಜನಗರ: ದೇವರಿಗೆ ತಮ್ಮ ಇಷ್ಟಾರ್ಥ ಫಲಿಸಲೆಂದು ಭಕ್ತರು ವಿವಿಧ ಹರಕೆ, ಕೋರಿಕೆ ಪತ್ರಗಳನ್ನು ಹಾಕುವುದು ಸಾಮಾನ್ಯ. ಅದರಂತೆ, ಇಲ್ಲೋರ್ವ ಯುವತಿ ತಾನಿಚ್ಛೆಪಟ್ಟ ಯುವಕ ಸಿಗಲಿ ಎಂದು ಪತ್ರ ಹಾಕಿ ಬೇಡಿಕೊಂಡಿದ್ದಾಳೆ.
ಚಾಮರಾಜನಗರ ತಾಲೂಕಿನ ಮುಕ್ಕಡಹಳ್ಳಿ ಗ್ರಾಮದ ” ಮಾಯಮ್ಮ ದೇವಮ್ಮ” ದೇವಾಲಯದಲ್ಲಿ ಇಂದು ಹುಂಡಿ ಎಣಿಕೆ ನಡೆದ ವೇಳೆ ಯುವತಿಯೊಬ್ಬಳು ಪತ್ರವೊಂದನ್ನು ಹಾಕಿದ್ದು ‘ ದೇವರೆ, ನನ್ನ ಮೂರ್ತಿನಾ ಬಿಟ್ಟು ಯಾರೂ ನನ್ನ ಕುತ್ತಿಗೆಗೆ ತಾಳಿ ಕಟ್ಟಬಾರದು’ ಎಂದು ಪತ್ರ ಹಾಕಿದ್ದು ಆಕೆಯ ಪ್ರಾರ್ಥನೆ ಫಲಿಸಿತೇ ಇಲ್ಲವೇ ಎಂಬುದು ಸದ್ಯ ನಿಗೂಢವಾಗಿದೆ.
ಕೆಲ ದಿನಗಳ ಹಿಂದೆಯಷ್ಟೇ ಚಾಮರಾಜನಗರದ ಚಾಮರಾಜೇಶ್ವರ ದೇವಾಲಯ ಹುಂಡಿ ಎಣಿಕೆ ಕಾರ್ಯ ನಡೆದಿದ್ದ ವೇಳೆ ಪತ್ರಗಳು, ಆಹ್ವಾನ ಪತ್ರಿಕೆಗಳು ಕೂಡ ಪತ್ತೆಯಾಗಿತ್ತು. ಏಸು ಭಕ್ತನೋರ್ವ ಕ್ರಿಸ್ತ ಹುಟ್ಟಿದ ಬಗೆ, ಕ್ರಿಸ್ತನನ್ನು ನಂಬಿದ್ದೆಲ್ಲಾ ಬರೆದು ದೇವರ ಹುಂಡಿಗೆ ಹಾಕಿದ್ದು ” ದೇವರ ರಾಜ್ಯ ಸಮೀಪಿಸಿದೆ” ಎಂಬ ನಿಗೂಢಾರ್ಥ ವಾಕ್ಯವನ್ನು ಬರೆದುಕೊಂಡಿದ್ದ.
ಇನ್ನು, ಯುವಕನೋರ್ವ ತನಗೆ ಹುಡುಗಿ ಕರುಣಿಸು, ಪ್ರೀತಿಯ ದೇವರೆ ಎಂದು ಶಿವಲಿಂಗದ ಚಿತ್ರ ಬರೆದು ಹುಂಡಿಗೆ ಹಾಕಿ ಪ್ರಾರ್ಥಿಸಿದ್ದನು. ಯುವತಿ ಭಾವಚಿತ್ರ, ಆಹ್ವಾನ ಪತ್ರಿಕೆಗಳು ಕೂಡ ಹುಂಡಿಯಲ್ಲಿ ಪತ್ತೆಯಾಗಿತ್ತು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw