ಮುರುಘಾ ಶ್ರೀಯಿಂದಾದ ದೌರ್ಜನ್ಯವನ್ನು ಬಿಚ್ಚಿಟ್ಟ ಹಳೆಯ ವಿದ್ಯಾರ್ಥಿನಿ! - Mahanayaka
7:17 AM Thursday 12 - December 2024

ಮುರುಘಾ ಶ್ರೀಯಿಂದಾದ ದೌರ್ಜನ್ಯವನ್ನು ಬಿಚ್ಚಿಟ್ಟ ಹಳೆಯ ವಿದ್ಯಾರ್ಥಿನಿ!

murugha shree
10/11/2022

ಚಿತ್ರದುರ್ಗ: ಬಡ, ಅನಾಥ ಮಕ್ಕಳನ್ನು ತನ್ನ ಮಕ್ಕಳ ಸ್ಥಾನದಲ್ಲಿ ನೋಡಬೇಕಾದ ಸ್ವಾಮೀಜಿ, ಲೈಂಗಿಕ ದಾಹ ತೀರಿಸಲು ಬಳಸಿದ್ದು ಇಡೀ ನಾಗರಿಕ ಸಮಾಜವೇ ತಲೆ ತಗ್ಗಿಸುವಂತೆ ಮಾಡಿದೆ. ಈ ನಡುವೆ, ಮುರುಘಾ ಮಠದ ಶಿವಮೂರ್ತಿ ಶರಣರ ಮತ್ತಷ್ಟು ದೌರ್ಜನ್ಯದ ಕಥೆಗಳು ಬಿಚ್ಚಿಕೊಂಡಿವೆ.

ಹಾಸ್ಟೆಲ್ ನಲ್ಲಿ ಅನುಭವಿಸಿದ ದೌರ್ಜನ್ಯವನ್ನು ಹಳೆಯ ವಿದ್ಯಾರ್ಥಿನಿಯೋರ್ವಳು ವಿವರಿಸಿದ್ದು, ಹಾಸ್ಟೆಲ್ ವಾರ್ಡನ್ ರಶ್ಮಿ ಬಂದ ಮೇಲೆ ಮಠದ ಚಿತ್ರಣವೆಲ್ಲ ಬದಲಾಗಿದೆ ಎಂದು ಆಕೆ ಹೇಳಿದ್ದಾರೆ.

2012ರಲ್ಲಿ ನಾನು ಮಠದಲ್ಲಿ 8ನೇ ತರಗತಿ ಓದುತ್ತಿದ್ದೆ. ನನ್ನನ್ನು ಬಲವಂತವಾಗಿ ಸ್ವಾಮೀಜಿ ಹತ್ತಿರ ಕಳುಹಿಸುತ್ತಿದ್ದರು. ಹಣ್ಣು ಕೊಟ್ಟು ಹೋಗು ಅಂತಿದ್ದರು. ನಾನು ಹಾಗೂ ಸ್ನೇಹಿತೆ ಹೋಗುತ್ತಿದ್ದೆವು ಎಂದಿದ್ದಾರೆ.

ಎಲ್ಲರೂ ಮಲಗಿದ ಬಳಿಕ ಹಿಂಬಾಗಿಲಿನ ಮೂಲಕ ಹೋಗುತ್ತಿದ್ದೆವು. ಶ್ರೀಗಳು ಡ್ರೈಪ್ರೂಟ್ಸ್, ಚಾಕ್ಲೆಟ್ ಕೊಡುತ್ತಿದ್ದರು. ಆ ಬಳಿಕ ವಸ್ತ್ರ ಕಳಚುವಂತೆ ಹೇಳುತ್ತಿದ್ದರು. ಗಂಡ ಹೆಂಡತಿಯಂತೆ ನಮ್ಮ ಜೊತೆ ಸೇರುತ್ತಿದ್ದರು. ಬೆಳಗ್ಗಿನ ಜಾವ ಅಲರಾಂ ಇಟ್ಟುಕೊಂಡು ಎಚ್ಚರಿಸುತ್ತಿದ್ದರು. ಬೆಳಗ್ಗಿನ ವೇಳೆ ಹಾಸ್ಟೆಲ್ ಸೇರುತ್ತಿದ್ದೆವು. ಈ ವಿಷಯ ಹಾಸ್ಟೆಲ್ ನಲ್ಲಿದ್ದವರಿಗೆ ತಿಳಿದ ಮೇಲೆ ನನ್ನನ್ನು ಮಲ್ಲಾಡಿಹಳ್ಳಿ ಹಾಸ್ಟೆಲ್ ಗೆ ಕಳುಹಿಸಿದ್ದರು ಎಂದು ಹಳೆಯ ವಿದ್ಯಾರ್ಥಿನಿ ಹೇಳಿರುವುದಾಗಿ ವರದಿಯಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ