ಮೃತಪಟ್ಟ ಮಹಿಳೆಯ ಅಕೌಂಟ್ ನಿಂದ 5 ವರ್ಷದ ಬಳಿಕ ಹಣ ಡ್ರಾ | ಇದು ಭೂತ-ಪಿಶಾಚಿಯ ಕಾಟ ಅಲ್ಲ, ಮತ್ತಿನ್ನೇನು? - Mahanayaka
3:54 AM Thursday 19 - September 2024

ಮೃತಪಟ್ಟ ಮಹಿಳೆಯ ಅಕೌಂಟ್ ನಿಂದ 5 ವರ್ಷದ ಬಳಿಕ ಹಣ ಡ್ರಾ | ಇದು ಭೂತ-ಪಿಶಾಚಿಯ ಕಾಟ ಅಲ್ಲ, ಮತ್ತಿನ್ನೇನು?

29/01/2021

ಮಂಡ್ಯ: ಮೃತಪಟ್ಟು 5 ವರ್ಷವಾದ ಬಳಿಕ ಮಹಿಳೆಯ ಅಂಚೆ ಕಚೇರಿ ಅಕೌಂಟ್ ನಿಂದ 19 ಸಾವಿರ ರೂಪಾಯಿ ಹಣ ಡ್ರಾ ಮಾಡಲಾಗಿದೆ. ಮೃತಪಟ್ಟ ಮಹಿಳೆಗೆ ಹೇಗೆ ಹಣ ಡ್ರಾ ಮಾಡಲು ಸಾಧ್ಯ? ಸಿನಿಮಾದಲ್ಲಿ ಬರುವಂತೆ ಭೂತ-ಪ್ರೇತದ ಕಾಟ ಇದಾಗಿದೆಯೇ? ಎಂದು ನೀವು ಅನುಮಾನ ಪಡುವುದಿದ್ದರೆ, ಅದು ನಿಜ. ಆದರೆ ಇಲ್ಲಿ ಭ್ರಷ್ಟ ಅಧಿಕಾರಿಗಳೇ ಈ ಭೂತ-ಪ್ರೇತವಾಗಿ ಕಾಡಿದ್ದಾರೆ.

ಸರ್ಕಾರದ ಬ್ಯಾಂಕ್ ಇದು ತುಂಬಾ ಸುರಕ್ಷಿತ ಎಂದು ಜನರು ಅಂಚೆ ಕಚೇರಿಯಲ್ಲಿ ಹಣ ಇಟ್ಟರೆ ಭ್ರಷ್ಟ ಅಧಿಕಾರಿಗಳು ಅದನ್ನು ಕೂಡ ಮುಕ್ಕಿ ತಿನ್ನಲು ಆರಂಭಿಸಿದ್ದಾರೆ. ಮಂಡ್ಯದಲ್ಲಿ ನಡೆದ ಈ ಘಟನೆಯಿಂದಾಗಿ ಸಾರ್ವಜನಿಕರು ಅಂಚೆ ಕಚೇರಿಯಲ್ಲಿ ಹಣ ಠೇವಣಿ ಇಡಲು ಹಿಂದೆ ಮುಂದೆ ನೋಡುವಂತಾಗಿದೆ.

ಕೆರಗೋಡು ಗ್ರಾಮದ ವೃದ್ಧೆ ವಿಜಯಾಂಭ ಎಂಬವರು ಮಂಡ್ಯ ತಾಲೂಕಿನ ಕೆರಗೋಡು ಉಪ ಅಂಚೆ ಕಚೇರಿಯಲ್ಲಿ ಖಾತೆ ಹೊಂದಿದ್ದರು. ಆದರೆ ಅವರು 5 ವರ್ಷಗಳ ಹಿಂದೆ( 2011) ನಿಧನರಾಗಿದ್ದರು. ವಿಜಯಾಂಭ ಅವರು ಅಂಚೆ ಕಚೇರಿಯಲ್ಲಿ ಹಣ ಇಟ್ಟಿದ್ದಾರೆ ಎಂಬ ವಿಚಾರ ಕುಟುಂಬಸ್ಥರಿಗೂ ತಿಳಿದಿರಲಿಲ್ಲ. ಹೀಗಿರುವಾಗ  2018 ರಲ್ಲಿ ಮನೆ ಸ್ವಚ್ಛ ಮಾಡುತ್ತಿರುವ ವೇಳೆ ವಿಜಯಾಂಭ ಅವರ ಅಂಚೆ ಕಚೇರಿಯ ಪಾಸ್ ಪುಸ್ತಕ ದೊರಕಿದೆ.


Provided by

ಈ ಪಾಸ್ ಪುಸ್ತಕವನ್ನು ಅವರ ಡೆತ್ ಸರ್ಟಿಫಿಕೆಟ್ ಹಿಡಿದುಕೊಂಡು ಅಂಚೆ ಕಚೇರಿಗೆ ತೆರಳಿದ ಕುಟುಂಬಸ್ಥರಿಗೆ ಶಾಕ್ ಆಗಿದೆ. 2016ರ ಜೂನ್ ನಲ್ಲಿಯೇ ವಿಜಯಾಂಭ ಅವರ ಖಾತೆಯಿಂದ 19 ಸಾವಿರ ಹಣ ಡ್ರಾ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಈ ಸಂಬಂಧ ಮೃತರ ಕುಟುಂಬಸ್ಥರು ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಅವರಿಗೂ ದೂರು ನೀಡಿದ್ದಾರೆ. ಆದರೆ ಇನ್ನೂ ಕೂಡ ಈ ಬಗ್ಗೆ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಪ್ರಸಾದ್ ಅವರು ಸತತ ಮೂರು ವರ್ಷಗಳಿಂದ ಅಲೆದಾಡುತ್ತಿದ್ದಾರೆ ಎಂದು ವರದಿಯಾಗಿದೆ.

ಇತ್ತೀಚಿನ ಸುದ್ದಿ