ಸಿದ್ಧರಾಮಯ್ಯನವರೇ ಮುಸಲ್ಮಾರ ಏರಿಯಾಗಳು ಪಾಕಿಸ್ತಾನದಲ್ಲಿವೆಯಾ?: ಶಾಸಕ ವೇದವ್ಯಾಸ ಕಾಮತ್ ಪ್ರಶ್ನೆ
ಮಂಗಳೂರು: ಮುಸಲ್ಮಾನರ ಏರಿಯಾಗಳಲ್ಲಿ ಸಾವರ್ಕರ್ ಚಿತ್ರ ಯಾಕೆ ಎಂಬ ಸಿದ್ದರಾಮಯ್ಯರ ಹೇಳಿಕೆಗೆ ಶಾಸಕ ವೇದವ್ಯಾಸ ಕಾಮತ್ ಪ್ರತಿಕ್ರಿಯೆ ನೀಡಿದ್ದಾರೆ.
ಸಿದ್ಧರಾಮಯ್ಯನವರೇ ಮುಸಲ್ಮಾರ ಏರಿಯಾಗಳು ಪಾಕಿಸ್ತಾನದಲ್ಲಿವೆಯಾ..? ಭಾರತದಲ್ಲಿ ಸ್ವಾತಂತ್ರ್ಯ ವೀರ ಸಾವರ್ಕರ್ ಅವರ ಭಾವಚಿತ್ರ ಬಳಸುವುದಕ್ಕೆ ಸಿದ್ಧರಾಮಯ್ಯ ಅಥವಾ ಕಾಂಗ್ರೇಸಿಗರ ಅನುಮತಿ ಬೇಕಿಲ್ಲ. ಸುಮ್ಮನೆ ಎರಡೆರಡು ಜೀವಾವಧಿ ಶಿಕ್ಷೆಯ ಬಿರುದು ಪಡೆದವರಲ್ಲ ಸಾವರ್ಕರ್. ಅಂಡಮಾನಿನ ಕಡು ಕತ್ತಲೆ ಕೋಣೆಯೊಳಗೂ ಸ್ವಾತಂತ್ರ್ಯದ ಕುರಿತು ಚಿಂತಿಸುತಿದ್ದ ಅವರನ್ನು ವಿರೋಧಿಸುವ ಹಕ್ಕು ಯಾರಿಗೂ ಇಲ್ಲ ಎಂದರು.
ಈ ದೇಶದ ಸ್ವಾತಂತ್ರ್ಯಕ್ಕಾಗಿ ಜೀವ ಸವೆಸಿದ ಕಾರಣಕ್ಕಾಗಿ ಅವರನ್ನು ಸ್ವಾತಂತ್ರ್ಯ ವೀರ ಎಂದು ಕರೆಯುತ್ತಾರೆಯೇ ವಿನಃ ತಮಗೆ ತಾವೇ ಭಾರತ ರತ್ನ ಕೊಟ್ಟಂತೆ ಪಡೆದ ಬಿರುದಲ್ಲ ಅದು. ಕರಿನೀರ ಶಿಕ್ಷೆ ದೂರದ ಮಾತು, ಐಷಾರಾಮಿ ವ್ಯವಸ್ಥೆಗಳಿದ್ದ ಜೈಲಿನೊಳಗೆ ರಾಜಕೀಯ ಖೈದಿಯಾಗಿ ಸೇರಿ ಅನಾರೋಗ್ಯದ ಕಾರಣ ನೀಡಿ ಕ್ಷಮಾರ್ಪಣೆ ಪತ್ರ ಬರೆದವರು ವೀರ ಸಾವರ್ಕರ್ ಕುರಿತು ಆಡಿಕೊಳ್ಳುವುದು ಹಾಸ್ಯಾಸ್ಪದ ಎನಿಸುವುದಿಲ್ಲವೇ ಎಂದು ಕಿಡಿಕಾರಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka