ಜೆಡಿಎಸ್ ನಿಂದ ಮುಸ್ಲಿಮ್ ಮುಖ್ಯಮಂತ್ರಿ: 120 ಸೀಟ್ ಬರಲ್ಲ, ಅದು ಆಗಲ್ಲ: ಕುಮಾರಸ್ವಾಮಿಗೆ ಜಮೀರ್ ಸವಾಲು
ಎಲ್ಲರೂ ರಾತ್ರಿ ಕನಸು ನೋಡಿದ್ರೆ, ಕುಮಾರಸ್ವಾಮಿ ಹಗಲು ಕನಸು ನೋಡ್ತಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ವ್ಯಂಗ್ಯವಾಡಿದ್ದಾರೆ.
ಮುಸ್ಲಿಮರಿಗೆ ಮುಖ್ಯಮಂತ್ರಿ ಸ್ಥಾನ ನೀಡುತ್ತೇನೆ ಅನ್ನೋ ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ಅವರು, 113 ಸ್ಥಾನ ಬಂದ್ರೆ ಮುಸ್ಲಿಮರಿಗೆ ಸಿಎಂ ಸ್ಥಾನ ನೀಡುತ್ತೇನೆ ಎಂದು ಹೇಳಿದ್ದಾರೆ. ಜನತಾ ದಳ(ಜೆಡಿಎಸ್) 113 ಸ್ಥಾನ ಗೆಲ್ಲಲು ಸಾಧ್ಯವೇ? ಎಂದು ಅವರು ಪ್ರಶ್ನಿಸಿದ್ದಾರೆ.
ಜೆಡಿಎಸ್ ಏನು ರಥ ಮಾಡಿದ್ರುನೂ 113 ಸೀಟ್ ಗೆಲ್ಲಲು ಸಾಧ್ಯವಿಲ್ಲ, ಏನಿದ್ರುನೂ ಜೆಡಿಎಸ್ 25-30 ಸೀಟು ಗೆಲ್ಲಬಹುದು ಅಷ್ಟೇ ಎಂದು ಜಮೀರ್ ಹೇಳಿದರು.
120 ಸೀಟ್ ಜೆಡಿಎಸ್ ಗೆ ಬರಲ್ಲ, ಮುಸಲ್ಮಾನ ಮುಖ್ಯಮಂತ್ರಿ ಆಗಲ್ಲ ಎಂದ ಜಮೀರ್ ಅಹ್ಮದ್, , ಸಮ್ಮಿಶ್ರ ಸರ್ಕಾರ ಆದ್ರುನೂ, ಮುಸಲ್ಮಾನರನ್ನು ಮುಖ್ಯಮಂತ್ರಿ ಮಾಡ್ತೀನಿ ಎಂದು ಕುಮಾರಸ್ವಾಮಿ ಅನೌನ್ಸ್ ಮಾಡಲಿ ಎಂದು ಜಮೀರ್ ಸವಾಲು ಹಾಕಿದ್ರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka