ಮುಸ್ಲಿಮರನ್ನು, ಕ್ರೈಸ್ತರನ್ನು ಘರ್ ವಾಪಸಿ ಮಾಡದೇ ಬೇರೆ ದಾರಿಯಿಲ್ಲ | ಸಂಸದ ತೇಜಸ್ವಿ ಸೂರ್ಯ

tejaswi surya
26/12/2021

ಉಡುಪಿ: ಮುಸ್ಲಿಮರನ್ನು, ಕ್ರೈಸ್ತರನ್ನು ಘರ್ ವಾಪಸಿ ಮಾಡದೇ ಬೇರೆ ದಾರಿಯಿಲ್ಲ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹೇಳಿಕೆ ನೀಡಿದ್ದು, ಮತಾಂತರವಾಗಿ ಪಾಕಿಸ್ತಾನಕ್ಕೆ ಹೋದವರನ್ನು ಕರೆತರಬೇಕು ಎಂದು ಹೇಳಿದ್ದಾರೆ.

ಉಡುಪಿಯಲ್ಲಿ ಈ ಹೇಳಿಕೆ ನೀಡಿರುವ ಅವರು, ಪಾಕ್ ಗೆ ಹೋದವರನ್ನೂ ಹಿಂದೂ ಧರ್ಮಕ್ಕೆ ಕರೆತರಬೇಕು. ಚೀನಾ, ಜಪಾನ್ ಗೆ ಮತಾಂತರಗೊಂಡವರನ್ನ ಕರೆತರಬೇಕು. ಟಿಪ್ಪು ಜಯಂತಿಯಂದೇ ನಾವು ಮರುಮತಾಂತರ ಮಾಡಬೇಕು. ಟಿಪ್ಪುವಿನ ಖಡ್ಗದ ಕಾರಣಕ್ಕೆ ಬಹಳ ಮತಾಂತರಗಳಾಗಿವೆ. ಅಸಾಧ್ಯ ಎಂಬುವುದು ಯಾವುದೂ ಇಲ್ಲ. ನಮ್ಮ ಮನೆ ಪಕ್ಕ, ಗ್ರಾಮಗಳಲ್ಲಿ ಘರ್ ವಾಪಸಿ ಮಾಡಬೇಕು ಎಂದಿದ್ದಾರೆ.

ದೇಶದಲ್ಲಿ ರಾಮಮಂದಿರವನ್ನು ನಿರ್ಮಾಣ ಮಾಡಿದ್ದೇವೆ. ಕಾಶ್ಮೀರದಲ್ಲಿ 370 ಕಾಯ್ದೆಯನ್ನು ತೆಗೆದುಹಾಕಿದ್ದೇವೆ. ಪಾಕ್ ಮುಸಲ್ಮಾನರನ್ನ ಹಿಂದೂಗಳಾಗಿ ಪರಿವರ್ತಿಸಬೇಕು. ಆದ್ಯ ಕರ್ತವ್ಯದ ರೀತಿಯಲ್ಲಿ ಘರ್ ವಾಪಸಿ ಮಾಡಬೇಕು. ಅಖಂಡ ಭಾರತದ ಕಲ್ಪನೆಯಲ್ಲಿ ಪಾಕಿಸ್ತಾನವು ಇದೆ ಎಂದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DbJM9kayC1K4utc3ntXPdh

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಕಳೆದ 7 ವರ್ಷಗಳಿಂದ ಮೋದಿ ಸರ್ಕಾರ ‘ಉತ್ತಮ ಆಡಳಿತ’ ನೀಡುತ್ತಿದೆ | ಅಮಿತ್ ಶಾ

ರಾಜಸ್ಥಾನ: ಮಿಗ್​-21 ಫೈಟರ್​ ಜೆಟ್​ ಪತನ; ಪೈಲಟ್​ ವಿಂಗ್​ ಕಮಾಂಡರ್ ಹುತಾತ್ಮ​

ಮೂಡುಬಿದಿರೆ: ಎಸ್​ ಕೆಎಫ್​ ಕಾರ್ಖಾನೆಯಿಂದ ತೊಂದರೆ: ಗ್ರಾಮಸ್ಥರಿಂದ ಅಹೋರಾತ್ರಿ ಪ್ರತಿಭಟನೆ

ಉತ್ತರಾಖಂಡ್: ಸಚಿವ ಹರಕ್ ಸಿಂಗ್, ಶಾಸಕರೊಬ್ಬರ ದಿಢೀರ್ ರಾಜೀನಾಮೆ

ಸ್ನೇಹಿತನಿಂದಲೇ ಯುವಕನ ಕೊಲೆ: ಆರೋಪಿಯ ಬಂಧನ

ತಿಮಿಂಗಿಲ ವಾಂತಿ ಮಾರಾಟಕ್ಕೆ ಯತ್ನ: ಮೂವರ ಬಂಧನ​

ಇತ್ತೀಚಿನ ಸುದ್ದಿ

Exit mobile version