ವಕ್ಫ್ ಮಸೂದೆ ಬೆಂಬಲಿಸಿದ ನಿತೀಶ್ ಕುಮಾರ್ ಗೆ ಛಾಟಿ ಬೀಸಿದ ಮುಸ್ಲಿಂ ಸಂಘಟನೆಗಳು: ಇಫ್ತಾರ್ ಕೂಟಕ್ಕೆ ಮುಸ್ಲಿಮರು ಗೈರು

ವಕ್ಫ್ ತಿದ್ದುಪಡಿ ಮಸೂದೆಯನ್ನು ಬೆಂಬಲಿಸಿರುವ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಮುಸ್ಲಿಂ ಸಂಘಟನೆಗಳು ಪ್ರಬಲ ಸಂದೇಶವನ್ನು ರವಾನಿಸಿವೆ. ಅವರು ಏರ್ಪಡಿಸಿದ್ದ ಇಫ್ತಾರ್ ಕೂಟಕ್ಕೆ ಈ ಮುಸ್ಲಿಂ ಸಂಘಟನೆಗಳು ಬಹಿಷ್ಕಾರ ಹೇರಿವೆ ಮಾತ್ರ ಅಲ್ಲ ಮುಸ್ಲಿಮರು ಕೂಡ ಈ ಇಫ್ತಾರ್ ಕೂಟಟದಲ್ಲಿ ಭಾಗವಹಿಸದಂತೆ ಮನವಿ ಮಾಡಿದ್ದು ಅದು ಯಶಸ್ವಿಯಾಗಿದೆ. ಈ ಮೂಲಕ ಮಾರ್ಚ್ 23ರಂದು ಏರ್ಪಡಿಸಿದ್ದ ಇಫ್ತಾರ್ ಕೂಟ ಮುಸ್ಲಿಮರಿಲ್ಲದೆ ಭಣಗುಟ್ಟಿದೆ.
ನಿತೀಶ್ ಕುಮಾರ್ ಅವರ ಮನೆಯಲ್ಲಿ ಇಫ್ತಾರ್ ಕೂಟವನ್ನು ಏರ್ಪಡಿಸಲಾಗಿತ್ತು . ಕೆಲವು ನಾಯಕರನ್ನು ಬಿಟ್ಟರೆ ಉಳಿದಂತೆ ಮುಸ್ಲಿಂ ಸಮುದಾಯದ ನಾಯಕರಾರೂ ಈ ಇಫ್ತಾರ್ ಪಾರ್ಟಿಯಲ್ಲಿ ಭಾಗಿಯಾಗಿಲ್ಲ. ಈ ಇಫ್ತಾರ್ ಕೂಟದಲ್ಲಿ ಭಾಗವಹಿಸದಂತೆ ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್, ಇಮಾರತೆ ಶರಿಯ, ಜಮೀಯತೆ ಉಲಮಯೆ ಹಿಂದ್, ಜಮೀಯತೆ ಅಹ್ಲೆ ಹದೀಸ್, ಜಮಾಅತೆ ಇಸ್ಲಾಮಿ ಹಿಂದ್ ಸಹಿತ ಎಂಟು ಪ್ರಮುಖ ಮುಸ್ಲಿಂ ಸಂಘಟನೆಗಳು ಜನರಲ್ಲಿ ಕೋರಿಕೊಂಡಿತ್ತು ಮತ್ತು ತಾವು ಯಾಕೆ ಇಫ್ತಾರ್ ಕೂಟವನ್ನು ಬಹಿಷ್ಕರಿಸುತಿದ್ದೇವೆ ಅನ್ನುವುದನ್ನು ಪತ್ರದ ಮೂಲಕ ನಿತೀಶ್ ಕುಮಾರ್ ಅವರಿಗೆ ಸ್ಪಷ್ಟಪಡಿಸಿತ್ತು.
ಈ ಕಾರಣದಿಂದಾಗಿ ನಿತೀಶ್ ಕುಮಾರ್ ಅವರ ಪಾರ್ಟಿಯಲ್ಲಿ ಜೆಡಿಎಸ್ ನಾಯಕರು ಸರಕಾರಿ ಅಧಿಕಾರಿಗಳು ಮತ್ತು ಪಕ್ಷದ ಸದಸ್ಯರಷ್ಟೇ ಸೇರಿದ್ದರು. ಹಾಗೆಯೇ ಸೋಶಿಯಲ್ ಮೀಡಿಯಾದಲ್ಲಿ ಈ ಇಫ್ತಾರ್ ಪಾರ್ಟಿಯನ್ನು ಬಹಿಷ್ಕರಿಸುವಂತೆ ಭಾರಿ ದೊಡ್ಡ ಮಟ್ಟದಲ್ಲಿ ಪ್ರಚಾರವು ನಡೆದಿತ್ತು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj