ಸಂಭಾಲ್‌ನಲ್ಲಿ ಸ್ವಯಂಪ್ರೇರಿತರಾಗಿ ತಮ್ಮ ಮನೆ ಕೆಡವಲು ಆರಂಭಿಸಿದ ಮುಸ್ಲಿಂ ನಿವಾಸಿಗಳು
ಉತ್ತರ ಪ್ರದೇಶದ ಸಂಭಾಲ್‌ನಲ್ಲಿ ಮುಸ್ಲಿಂ ನಿವಾಸಿಗಳು ಸ್ವಯಂಪ್ರೇರಿತರಾಗಿ ತಮ್ಮ ಮನೆ ಕೆಡವಲು ಆರಂಭಿಸಿದ್ದಾರೆ. ಹಿಂದೂ ದೇವಾಲಯದ ಆಸ್ತಿಯನ್ನು ಒತ್ತುವರಿ ಮಾಡಿಕೊಂಡು ಮನೆ ನಿರ್ಮಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಬೆನ್ನಲ್ಲೇ, ಒತ್ತುವರಿ ಎಂದು ಅಧಿಕಾರಿಗಳು ಗುರುತಿಸದ ಮನೆಗಳನ್ನು ಕೆಡಿವಿಕೊಳ್ಳಲಾಗುತ್ತಿದೆ. ಅಧಿಕಾರಿಗಳಿಗೆ ಧ್ವಂಸ ಮಾಡಲು ಬಿಟ್ಟರೆ ಎಲ್ಲವನ್ನೂ ನಾಶ ಮಾಡುತ್ತಾರೆ ಎಂದು ಸಂಭಲ್‌ನ ನಿವಾಸಿಗಳು ಭೀತಿ ವ್ಯಕ್ತಪಡಿಸಿದ್ದಾರೆ.
ಸಂಭಲ್‌ನ ಜಾಮಾ ಮಸೀದಿಯ ಸ್ಥಳದಲ್ಲಿ ಹಿಂದೆ ಹಿಂದೂ ದೇವಾಲಯವಿತ್ತು ಎಂಬ ವಾದದ ಮೇಲೆ ಮಸೀದಿಯಲ್ಲಿ ಸಮೀಕ್ಷೆ ನಡೆಸಲು ಇತ್ತೀಚೆಗೆ ನ್ಯಾಯಾಲಯ ಆದೇಶಿಸಿತ್ತು. ಅಧಿಕಾರಿಗಳು ಸಮೀಕ್ಷೆಗೆ ಹೋದಾಗ ಹಿಂಸಾಚಾರ ನಡೆದಿತ್ತು. ಈ ನಡುವೆಯೂ ಸ್ಥಳೀಯ ಅಧಿಕಾರಿಗಳು ಮಸೀದಿ ಮಾತ್ರವಲ್ಲದೆ, ಇನ್ನೂ ಹಲವಾರು ಪ್ರದೇಶಗಳಲ್ಲಿ ಒತ್ತುವರಿ ಸರ್ವೇ ನಡೆಸಿದ್ದರು. ದೇವಾಲಯದ ಜಾಗವನ್ನು ಒತ್ತುವರಿ ಮಾಡಿಕೊಂಡು ಕೆಲ ಮನೆಗಳನ್ನು ನಿರ್ಮಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದರು.
ಒತ್ತುವರಿ ತೆರವು ಕಾರ್ಯಾಚರಣೆಯನ್ನೂ ನಡೆಸಿದ್ದರು.
ಈ ಬೆನ್ನಲ್ಲೇ, ಅಧಿಕಾರಿಗಳು ದೇವಾಲಯದ ಜಾಗವನ್ನು ಒತ್ತುವರಿ ಮಾಡಿಕೊಂಡು ನಿರ್ಮಿಸಿದ್ದಾರೆಂದು ಗುರುತಿಸಿದ್ದ ಮನೆಗಳನ್ನು ಸ್ವತಃ ಮುಸ್ಲಿಂ ನಿವಾಸಿಗಳು ಸ್ವಯಂಪ್ರೇರಿತರಾಗಿ ಕೆಡವಲು ಆರಂಭಿಸಿದ್ದಾರೆ. ಈ ಮೂಲಕ ನಾವು ಕನಿಷ್ಠ ನಮ್ಮ ಅಗತ್ಯ ವಸ್ತುಗಳನ್ನಾದರೂ ರಕ್ಷಿಸಿಕೊಳ್ಳಬಹುದು. ಅಧಿಕಾರಿಗಳಿಗೆ ಧ್ವಂಸ ಮಾಡಲು ಅವಕಾಶ ಕೊಟ್ಟರೆ, ಅವರು ನಮಗೆ ಏನನ್ನೂ ಉಳಿಸುವುದಿಲ್ಲ. ಎಲ್ಲವನ್ನೂ ನಾಶ ಮಾಡುತ್ತಾರೆ ಎಂದು ಸಂಭಲ್‌ನ ನಿವಾಸಿಗಳು ಭೀತಿ ವ್ಯಕ್ತಪಡಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj