ಮತಾಂತರ ವಿರೋಧಿ ಕಾನೂನಿನಡಿ ಬಂಧನವಾಗಿದ್ದ ಮುಸ್ಲಿಮ್ ಸಹೋದರರ ಬಿಡುಗಡೆ - Mahanayaka

ಮತಾಂತರ ವಿರೋಧಿ ಕಾನೂನಿನಡಿ ಬಂಧನವಾಗಿದ್ದ ಮುಸ್ಲಿಮ್ ಸಹೋದರರ ಬಿಡುಗಡೆ

19/12/2020

ಉತ್ತರಪ್ರದೇಶ: ಮತಾಂತರ ವಿರೋಧಿ ಕಾನೂನಿನ ಅಡಿಯಲ್ಲಿ ಉತ್ತರಪ್ರದೇಶ ಪೊಲೀಸರಿಂದ  ಬಂಧಿಸಲ್ಪಟ್ಟಿದ್ದ  ಮುಸ್ಲಿಮ್ ವ್ಯಕ್ತಿ ಹಾಗೂ ಆತನ ಸಹೋದರನನ್ನು ಬಿಡುಗಡೆ ಮಾಡಲಾಗಿದ್ದು, ಹಿಂದೂ ಯುವತಿಯನ್ನು ಬಲವಂತವಾಗಿ ಮತಾಂತರ ಮಾಡಿದ ಬಗ್ಗೆ ಯಾವುದೇ ಸಾಕ್ಷಿಗಳು ಇಲ್ಲದ ಕಾರಣ ಇವರನ್ನು ಬಿಡುಗಡೆ ಮಾಡಲಾಗಿದೆ.

ಉತ್ತರ ಪ್ರದೇಶ ರಾಜಧಾನಿ ಲಖನೌನಿಂದ 350 ಕಿಲೋಮೀಟರ್​ ದೂರದಲ್ಲಿರುವ ಮೊರಾದಬಾದ್​ ಕಾಂತಾ ಪ್ರದೇಶದ ಹಿಂದೂ ಯುವತಿ 22 ವರ್ಷದ ಪಿಂಕಿ ಎಂಬಾಕೆಯನ್ನ ಬಲವಂತವಾಗಿ ಮತಾಂತರಗೊಳಿಸಿದ ರಶೀದ್​ ಅಲಿ (22) ಮದುವೆಯಾಗಲು ಯತ್ನಿಸಿದ್ದಾನೆ. ಇದಕ್ಕೆ ಆತನ ಸಹೋದರ ಸಲೀಂ ಅಲಿ (25) ಕೂಡ ಸಾಥ್​ ನೀಡಿದ್ದಾನೆ ಎಂದು ಪಿಂಕಿ ತಾಯಿ ದೂರು ನೀಡಿದ್ದರು. ಈ ಸಂಬಂಧ ಇವರಿಬ್ಬರನ್ನು ಪೊಲೀಸರು ಬಂಧಿಸಿದ್ದರು. ಆದರೆ, ಪಿಂಕಿಯನ್ನು ಬಲವಂತವಾಗಿ ಮತಾಂತರ ಮಾಡಿದರ ಬಗ್ಗೆ ಯಾವುದೇ ಸಾಕ್ಷಿ ಇಲ್ಲದ ಕಾರಣ ವಾರಗಳ ನಂತರ ಇಬ್ಬರನ್ನೂ ಬಿಡುಗಡೆ ಮಾಡಲಾಗಿದೆ.


Provided by

ಇಂದು ಬೆಳಗ್ಗೆ ಇಬ್ಬರು ಮುಸ್ಲಿಮ್ ಸಹೋದರರನ್ನು ಬಿಡುಗಡೆ ಮಾಡಲಾಗಿದೆ. ಬಲವಂತದ ಮತಾಂತರಕ್ಕೆ ಸಂವಿಧಾನದಲ್ಲಿ ಅವಕಾಶವಿಲ್ಲ. ಆದರೂ ಯೋಗಿ ಆದಿತ್ಯನಾಥ್ ಸರ್ಕಾರವು ಲವ್ ಜಿಹಾದ್ ಹೆಸರಿನಲ್ಲಿ ಬಲವಂತದ ಮತಾಂತರದ ವಿರುದ್ಧ ಕಾನೂನು ತಂದಿದ್ದೇವೆ ಎಂದು ಬಿಂಬಿಸಿದ್ದಾರೆ. ಬಲವಂತದ ಮತಾಂತರ ಅಪರಾಧ ಎಂದು ಸಂವಿಧಾನದಲ್ಲಿ ಮೊದಲೇ ಇದೆ. ಆದರೆ ಈ ಕಾನೂನನ್ನು ನಾವು ತಂದಿದ್ದೇವೆ ಎಂಬಂತೆ ಬಿಜೆಪಿ ಬಿಂಬಿಸುವ ಮೂಲಕ ಜನರನ್ನು ಗೊಂದಲಕ್ಕೀಡು ಮಾಡುತ್ತಿದೆ ಎನ್ನುವ ಅಭಿಪ್ರಾಯಗಳು ಕೇಳಿ ಬಂದಿವೆ.

ಇತ್ತೀಚಿನ ಸುದ್ದಿ