ಬುರ್ಖಾ ಹಾಕಿ ನೃತ್ಯ ಮಾಡಿದ ವಿದ್ಯಾರ್ಥಿಗಳ ಅಮಾನತು ಸ್ವಾಗತಾರ್ಹ ಎಂದ ಮುಸ್ಲಿಂ ಒಕ್ಕೂಟ
ಇತ್ತೀಚೆಗೆ ನಗರದ ಖಾಸಗಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮುಸ್ಲಿಮ್ ವಿದ್ಯಾರ್ಥಿಗಳು ವಿದ್ಯಾರ್ಥಿ ಸಂಘದ ವತಿಯಿಂದ ನಡೆದ ಕಾಲೇಜು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅನೌಪಚಾರಿಕ ವಾಗಿ ಬುರ್ಖಾ ಧರಿಸಿ ನೃತ್ಯ ಮಾಡಿದ ದೃಶ್ಯವು ಸಾಮಾಜಿಕ ತಾಣಗಳಲ್ಲಿ ವೈರಲ್ ಗೊಂಡ ನಂತರ ಕಾಲೇಜು ಆಡಳಿತ ಮಂಡಳಿ ವಿದ್ಯಾರ್ಥಿಗಳನ್ನು ಅಮಾನತುಗೊಳಿಸಿದ ಕ್ರಮ ಸ್ವಾಗತಾರ್ಹ.
ಯಾವುದೇ ಧರ್ಮದ ವಸ್ತ್ರ ಪೋಷಾಕುಗಳನ್ನು ಕೇವಲವಾಗಿ ಮತ್ತು ಅವಹೇಳನ ದ ರೀತಿಯಲ್ಲಿ ಬಿಂಬಿಸಿ ಆಮೂಲಕ ವಸ್ತ್ರದ ಗಂಭೀರತೆಯನ್ನು ನಾಶಪಡಿಸುವ ಇಂತಹ ನಡೆಗಳು ಧಾರ್ಮಿಕ ನಂಬಿಕೆಗೆ ಧಕ್ಕೆಯಾಗುತ್ತದೆ. ಆದುದರಿಂದ ಇಂತಹ ಘಟನೆಗೆ ಯಾರೇ ಕಾರಣ ಆದರೂ ಅವರ ವಿರುದ್ಧ ನಡೆಸಿದ ಶಿಸ್ತು ಕ್ರಮಗಳನ್ನು ಸಮರ್ಥಿಸ ಬೇಕಿದೆ ಎಂದು ಮುಸ್ಲಿಂ ಒಕ್ಕೂಟದ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಕೆ.ಅಶ್ರಫ್ ತಿಳಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka