ಮುಸ್ಲಿಂ ವ್ಯಾಪಾರಿಗಳ ಮೇಲೆ ನಿಷೇಧ ಹೇರಲು ಬಿಡುವುದಿಲ್ಲ: ಬಿಜೆಪಿ ಶಾಸಕ ಅನಿಲ್ ಬೆನಕೆ - Mahanayaka
8:21 PM Wednesday 11 - December 2024

ಮುಸ್ಲಿಂ ವ್ಯಾಪಾರಿಗಳ ಮೇಲೆ ನಿಷೇಧ ಹೇರಲು ಬಿಡುವುದಿಲ್ಲ: ಬಿಜೆಪಿ ಶಾಸಕ ಅನಿಲ್ ಬೆನಕೆ

anil benalke mla
29/03/2022

ಬೆಳಗಾವಿ: ದೇವಸ್ಥಾನಗಳ ಬಳಿ ಇರುವ ಮುಸ್ಲಿಂ ವ್ಯಾಪಾರಿಗಳನ್ನು ಬಹಿಷ್ಕರಿಸುವಂತೆ ಕರೆ ನೀಡಿರುವ ಮಧ್ಯೆಯೇ, ಮುಸ್ಲಿಂ ವ್ಯಾಪಾರಿಗಳ ಮೇಲೆ ನಿಷೇಧ ಹೇರಲು ಬಿಡುವುದಿಲ್ಲ ಎಂದು ಬೆಳಗಾವಿಯ ಬಿಜೆಪಿ ಶಾಸಕ ಅನಿಲ ಬೆನಕೆ ಹೇಳಿದ್ದಾರೆ.

ಆಡಳಿತಾರೂಢ ಬಿಜೆಪಿ ಈಗಾಗಲೇ ದೇವಸ್ಥಾನದ ಆವರಣ ಮತ್ತು ಧಾರ್ಮಿಕ ಜಾತ್ರೆಗಳಲ್ಲಿ ಹಿಂದೂಯೇತರ ವ್ಯಾಪಾರಿಗಳಿಗೆ ಅವಕಾಶ ನೀಡದ ದೇವಸ್ಥಾನದ ಅಧಿಕಾರಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಈ ನಡುವೆ ಶಾಸಕ ಅನಿಲ ಬೆನಕೆ ಅವರು, ಕೆಲವು ಅಂಗಡಿಗಳಿಂದ ಮಾತ್ರ ಖರೀದಿ ಮಾಡಲು ಜನರಿಗೆ ಹೇಳುವುದು ತಪ್ಪು. ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ ಹೇರುವ ಪ್ರಶ್ನೆಯೇ ಇಲ್ಲ. ನಾವು ಅವರನ್ನು ತಡೆಯುವುದಿಲ್ಲ ಎಂದರು.

ಎಲ್ಲರಿಗೂ ಅವರವರ ಆಯ್ಕೆಗೆ ಅನುಗುಣವಾಗಿ ವ್ಯಾಪಾರ ನಡೆಸಲು ಸ್ವಾತಂತ್ರ್ಯವಿದೆ. ಜನರು ಎಲ್ಲಿಂದ ಖರೀದಿಸಬೇಕು ಎಂಬುದನ್ನು ನಿರ್ಧರಿಸಬೇಕು ಎಂದು ಅವರು ಹೇಳಿದರು.

ಸಚಿವ ಸ್ಥಾನದ ಆಕಾಂಕ್ಷಿಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಬೆನಕೆ ಅವರು ಸಕಾರಾತ್ಮಕವಾಗಿ ಉತ್ತರಿಸಿದ್ದಾರೆ. ಕಳೆದ ಬಾರಿ ಮರಾಠಾ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಿಲ್ಲ, ಬೇಡಿಕೆ ಹೆಚ್ಚಿದೆ, ಆದರೂ ಹೈಕಮಾಂಡ್ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ ಎಂದರು.

ಅಲ್ಲದೆ, ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಮೊದಲ ದಿನದಂದು ಹಿಜಾಬ್ ಧರಿಸಿ ತಮ್ಮ ಶಿಕ್ಷಣ ಸಂಸ್ಥೆಗೆ ಬಂದ ವಿದ್ಯಾರ್ಥಿಗಳನ್ನು ಶಾಸಕ ಅನಿಲ್ ಅವರು ಹೂವುಗಳೊಂದಿಗೆ ಸ್ವಾಗತಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ವಾಟ್ಸಾಪ್ ಗ್ರಾಹಕರಿಗೆ ಸಿಹಿ ಸುದ್ದಿ: ಬರುತ್ತಿದೆ ಹೊಸ ಅಪ್ಡೇಟ್

ಮಲಗಿದ್ದ ಬಾಲಕಿ ಮೇಲೆ ಟೆಂಪೋ ಹತ್ತಿಸಿದ ಚಾಲಕ: ಬಾಲಕಿ ಸಾವು

ಕೊಂಡೋತ್ಸವ ನೋಡಲು ಮನೆಯ ಮೇಲ್ಛಾವಣಿ ಹತ್ತಿದ 100 ಜನ: ನಡೆದೇ ಹೋಯ್ತು ದುರಂತ

ಹುಲಿ ದಾಳಿಗೆ ಯುವಕ ಬಲಿ

ಇತ್ತೀಚಿನ ಸುದ್ದಿ