ಯುಪಿಯಲ್ಲಿ ಬಯಲಾಯ್ತು ಕ್ರೂರ ಕೃತ್ಯ: ಮುಸ್ಲಿಂ ಯುವಕನನ್ನು ಥಳಿಸಿ‌ ಹತ್ಯೆ - Mahanayaka

ಯುಪಿಯಲ್ಲಿ ಬಯಲಾಯ್ತು ಕ್ರೂರ ಕೃತ್ಯ: ಮುಸ್ಲಿಂ ಯುವಕನನ್ನು ಥಳಿಸಿ‌ ಹತ್ಯೆ

22/01/2025

26 ವರ್ಷದ ಮುಹಮ್ಮದ್ ಸಲೀಂ ಎಂಬ ಯುವಕನನ್ನು ಉತ್ತರ ಪ್ರದೇಶದ ಸಹರಾನ್ ಪುರ ಜಿಲ್ಲೆಯ ನವಾಡದಲ್ಲಿ ಥಳಿಸಿ ಹತ್ಯೆ ಮಾಡಲಾಗಿದೆ. ಈತನನ್ನು ತಲೆಕೆಳಗೆ ಮಾಡಿ ತೂಗು ಹಾಕಿ ಥಳಿಸ್ತಾ ಇರುವ ವಿಡಿಯೋ ಜನವರಿ 13ರಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಜನವರಿ 18ರಂದು ಚಿಕಿತ್ಸೆ ಫಲಕಾರಿಯಾಗದೆ ಈತ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಮೊಹಮ್ಮದ್ ಸಲೀಂ ಮತ್ತು ಆತನ ಜೊತೆಗಿದ್ದ ಮೊಹಮ್ಮದ್ ರಫೀದ್ ಅವರನ್ನು ತಲೆಕೆಳಗಾಗಿ ನೇತಾಡಿಸಿ ದೊಣ್ಣೆಯಿಂದ ಹೊಡೆಯಲಾಗಿದೆ.

ಇವರಿಬ್ಬರೂ ರಾಜ್ ಕುಮಾರ್ ಎಂಬವರ ಮನೆ ಕಳ್ಳತನಕ್ಕೆ ಪ್ರಯತ್ನಿಸಿದ್ರು. ಕುಟುಂಬದವರು ಬೊಬ್ಬೆ ಹಾಕಿದಾಗ ಊರವರು ಜೊತೆ ಸೇರಿದ್ರು. ಅವರನ್ನು ಹಿಡಿದು ಥಳಿಸಿದ್ರು ಎಂದು ಸಹರಾನ್ ಪುರ ಜಿಲ್ಲೆಯ ಪೊಲೀಸ್ ಮುಖ್ಯಸ್ಥ ಸಾಗರ್ ಜೈನ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.


Provided by

ಮೃತಪಟ್ಟ ಸಲೀಂ ಮತ್ತು ಆತನ ಜೊತೆಗಾರನ ಮೇಲೆ ಕಳ್ಳತನದ ಪ್ರಕರಣವನ್ನ ದಾಖಲಿಸಲಾಗಿದೆ. ಆದರೆ ಥ ಳಿಸಿದ ಆರೋಪಿಗಳನ್ನು ಇನ್ನು ಬಂದಿಸಲಾಗಿಲ್ಲ. ಆದರೆ ಈ ಥಳಿಸಿದ ಆರೋಪಿಗಳ ಪರಿಚಯ ಸ್ಪಷ್ಟವಾಗುವಂತಹ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ