ಮುಸ್ಲಿಮ್ ಯುವತಿಯನ್ನು ಮದುವೆಯಾಗಿದಕ್ಕೆ ದಲಿತ ಯುವಕನ ಬರ್ಬರ ಹತ್ಯೆ!
ಹೈದರಾಬಾದ್: ದಲಿತ ಯುವಕನನ್ನು ಮದುವೆಯಾದಳು ಎನ್ನುವ ಕಾರಣಕ್ಕೆ, ಮುಸ್ಲಿಮ್ ಯುವತಿಯ ಎದುರೇ ದಲಿತ ಯುವಕನನ್ನು ಆಕೆಯ ಸಹೋದರ ಮತ್ತು ಸಹಚರರು ಬರ್ಬರವಾಗಿ ಹತ್ಯೆ ನಡೆಸಿದ ಘಟನೆ ಹೈದರಾಬಾದ್ ನಲ್ಲಿ ನಡೆದಿದ್ದು, ಘಟನೆಯ ಭೀಕರತೆಯನ್ನು ಯುವತಿ ತೀವ್ರ ಹತಾಶೆಯಿಂದ ಮುಸ್ಲಿಮ್ ಯುವತಿ ವಿವರಿಸಿದ್ದಾಳೆ.
ಹೈದರಾಬಾದ್ ನ ಮುಸ್ಲಿಮ್ ಯುವತಿ ಸೈಯದ್ ಆಶ್ರಿನ್ ಸುಲ್ದಾನ್ ಹಾಗೂ ದಲಿತ ಯುವಕ ನಾಗರಾಜು ವಿವಾಹವಾಗಿದ್ದರು. ದಲಿತ ಯುವಕನನ್ನು ತನ್ನ ಸಹೋದರಿ ವಿವಾಹವಾದಳು ಎನ್ನುವ ಕಾರಣಕ್ಕೆ ಆಕೆಯ ಸಹೋದರ ಹಾಗೂ ಸಹಚರರು ಭೀಕರವಾಗಿ ಹತ್ಯೆ ಮಾಡಿದ್ದಾರೆ.
ನಾಗರಾಜುನನ್ನು ಆಶ್ರಿನ್ ಸುಲ್ತಾನಾಳ ಕಣ್ಣಮುಂದೆಯೇ ಬರ್ಬರವಾಗಿ ಹತ್ಯೆ ಮಾಡಿದ್ದು, ನಾಗರಾಜುನ ಮೇಲೆ ಮಾರಣಾಂತಿವಾಗಿ ಹಲ್ಲೆ ನಡೆಸುತ್ತಿದ್ದರೂ ಯಾರು ಕೂಡ ನೆರವಿಗೆ ಬಾರದೇ ಫೋಟೋ ಮತ್ತು ವಿಡಿಯೋ ತೆಗೆಯುತ್ತಿದ್ದರು ಎಂದು ಆಶ್ರಿನ್ ಸುಲ್ತಾನಾ ಕಣ್ಣೀರು ಹಾಕಿದ್ದಾರೆ.
ನಾನು ಮತ್ತು ನನ್ನ ಪತಿ ಗುರುವಾರ ಸ್ಕೂಟಿಯಲ್ಲಿ ರಸ್ತೆ ದಾಟುತ್ತಿದ್ದೆವು. ಆ ಸಂದರ್ಭ ದಿಢೀರನೆ ಅಡ್ಡಗಟ್ಟಿದ ನನ್ನ ಸಹೋದರ ಸೈಯದ್ ಮೊಬಿನ್ ಅಹಮ್ಮದ್ ಮತ್ತು ಆತನ ಸಹಚರ ಮೊಹಮ್ಮದ್ ಮಸೂದ್ ಅಹಮ್ಮದ್ ಕಬ್ಬಿಣದ ಸರಳಿನಿಂದ ನನ್ನ ಪತಿ ಮೇಲೆ ಹಲ್ಲೆ ನಡೆಸಿ, ಚಾಕುವಿನಿಂದ ಇರಿದರು. ಪತಿಯನ್ನು ನನ್ನ ಕುಟುಂಬದವರೇ ಕೊಂದ ಹೃದಯ ವಿದ್ರಾವಕ ಘಟನೆಯನ್ನು ಕಂಡು ದಿಕ್ಕುತೋಚದಂತಾದೆ. ಸದಾ ಗಿಜಿಗುಡುವ ಹೈದರಾಬಾದ್‌ನ ರಸ್ತೆಯಲ್ಲಿ ವಾಹನಗಳಲ್ಲಿ ಹೋಗುತ್ತಿದ್ದ ಜನ ಮತ್ತು ದಾರಿಹೋಕರಲ್ಲಿ ಯಾರೊಬ್ಬರೂ ನೆರವಿಗೆ ಬರಲಿಲ್ಲ ಎಂದು ಹೇಳಿಕೊಂಡಿದ್ದಾರೆ.
ಆ ಸಂದರ್ಭ ನಾನು ಒಂಟಿಯಾಗಿದ್ದೆ. ನನ್ನ ಸಹೋದರ ಹೋದ ಬಳಿಕವೂ ಯಾರೊಬ್ಬರೂ ನೆರವಿಗೆ ಬರಲಿಲ್ಲ. ನನ್ನ ಗಂಡ ತಲೆಗೆ ಪೆಟ್ಟು ತಿಂದು ಸಾಯುತ್ತಿದ್ದನ್ನು ಪಕ್ಕದಲ್ಲಿದ್ದವರು ಸುಮ್ಮನೆ ನಿಂತು ನೋಡಿದರು. ಈ ಸಮಾಜದಲ್ಲಿ ಒಳ್ಳೆಯವರಿಲ್ಲ ಎಂದು ಆಶ್ರಿನ್ ಸುಲ್ತಾನಾ ಗದ್ಗದಿತರಾದರು.
ನಡುರಸ್ತೆಯಲ್ಲಿ ನನ್ನ ಪತಿ ಮೇಲೆ 15-20 ನಿಮಿಷಗಳ ಕಾಲ ಅತ್ಯಂತ ಕ್ರೂರವಾಗಿ ಹಲ್ಲೆ ನಡೆಸಿದರು. ಸುತ್ತಲೂ ಓಡಾಡುತ್ತಿದ್ದ ಜನ ಫೋಟೊ, ವಿಡಿಯೊ ತೆಗೆದುಕೊಂಡರೇ ಹೊರತು ಯಾರೊಬ್ಬರೂ ನೆರವಿಗೆ ಧಾವಿಸಲಿಲ್ಲ. ನನ್ನ ಪತಿ ಕೊನೆಯುಸಿರು ಎಳೆದ ಮೇಲೆ ಜನ ಸುತ್ತುವರಿದರು. ಪೊಲೀಸರು ಅರ್ಧ ಗಂಟೆ ಬಳಿಕ ಸ್ಥಳಕ್ಕೆ ಬಂದರು ಎಂದು ಆಶ್ರಿನ್ ನೋವು ತೋಡಿಕೊಂಡಿದ್ದಾರೆ.
ಹತ್ಯೆಗೀಡಾಗಿರುವ 25 ವರ್ಷ ವಯಸ್ಸಿನ ನಾಗರಾಜು ಸಿಕಂದರಾಬಾದ್‌ನ ಮರ್ರೆಡ್‌ಪಲ್ಲಿ ನಿವಾಸಿಯಾಗಿದ್ದು, ಓಲ್ಡ್ ಸಿಟಿಯ ಮಲಕ್‌ಪೇಟ್‌ನಲ್ಲಿರುವ ಜನಪ್ರಿಯ ಕಾರ್ ಶೋರೂಮ್‌ನಲ್ಲಿ ಸೇಲ್ಸ್‌ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದರು. ನಾಗರಾಜು ಮತ್ತು ಸುಲ್ತಾನಾ ಬಹಳ ಕಾಲದಿಂದ ಪ್ರೀತಿಸುತ್ತಿದ್ದರು. ಈ ವರ್ಷದ ಜನವರಿಯಲ್ಲಿ ಅವರು ಆರ್ಯ ಸಮಾಜದ ಮಂದಿರದಲ್ಲಿ ವಿವಾಹವಾಗಿದ್ದರು. ಆದರೆ ಬೇರೆ ಧರ್ಮದವನು ಅನ್ನೋದಕ್ಕಿಂತಲೂ ದಲಿತ ಎಂಬ ಕಾರಣಕ್ಕಾಗಿ ಹತ್ಯೆ ನಡೆದಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದ್ದು, ಜಾತಿಯ ಮನಸ್ಥಿತಿ ಮುಸ್ಲಿಮ್ ಸಮುದಾಯದಲ್ಲೂ ಇದೆಯೇ? ಎನ್ನುವ ಚರ್ಚೆಗಳಿಗೆ ಕಾರಣವಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ed8Qj9yS882JNjUvoz0kbs
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಭಾವಿ ಪತಿಯನ್ನೇ ಅರೆಸ್ಟ್ ಮಾಡಿದ ಮಹಿಳಾ ಸಬ್ ಇನ್ಸ್ ಪೆಕ್ಟರ್!
ಮದ್ಯ ಪ್ರಿಯರಿಗೆ ಶಾಕ್: ಮೇ 19ರವರೆಗೆ ಮದ್ಯ ಮಾರಾಟಗಾರರ ಮುಷ್ಕರ
ಹೊಟೇಲ್ ನಿಂದ ಖರೀದಿಸಿದ ಆಹಾರದಲ್ಲಿ ಹಾವಿನ ಚರ್ಮ ಪತ್ತೆ!
ಬೆಳ್ಳಂಬೆಳಗ್ಗೆ ಬೆಂಗಳೂರಿನಲ್ಲಿ ಭೀಕರ ಅಪಘಾತ: ಇಬ್ಬರ ದಾರುಣ ಸಾವು
ಸೆಖೆಯಿಂದ ತಪ್ಪಿಸಿಕೊಳ್ಳಲು ಆಟೋದ ಮೇಲೆಯೇ ಗಿಡ ನೆಟ್ಟ ಆಟೋ ಚಾಲಕ
ಕಿನ್ಯಾ ಗ್ರಾಮ ಪಂಚಾಯತ್ ನಿಂದ ದಲಿತರ ಕಡೆಗಣನೆ: ಪಂಚಾಯತ್ ಕಚೇರಿಯೆದುರು ಪ್ರತಿಭಟನೆ