ಮುಸ್ಲಿಮರ ವೇಷ ಧರಿಸಿ ಭಿಕ್ಷೆ ಬೇಡುತ್ತಿದ್ದ ಅನ್ಯಕೋಮಿನ ಐವರು ಪೊಲೀಸ್ ವಶಕ್ಕೆ - Mahanayaka

ಮುಸ್ಲಿಮರ ವೇಷ ಧರಿಸಿ ಭಿಕ್ಷೆ ಬೇಡುತ್ತಿದ್ದ ಅನ್ಯಕೋಮಿನ ಐವರು ಪೊಲೀಸ್ ವಶಕ್ಕೆ

beggars
18/02/2022

ಬೆಳಗಾವಿ: ಮುಸ್ಲಿಮರ ವೇಷ ಧರಿಸಿ ಭೀಕ್ಷೆ ಬೇಡುತ್ತಿದ್ದ ಐವರು ಅನ್ಯಕೋಮಿನ ಯುವಕರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

ಬೆಳಗಾವಿಯ ವೀರಭದ್ರ ನಗರದಲ್ಲಿ ಐವರು ಮುಸ್ಲಿಮರಂತೆ ವೇಷತೊಟ್ಟು ಅನುಮಾನಾಸ್ಪದವಾಗಿ ಓಡಾಡುತ್ತಾ, ಮನೆಮನೆಗಳಿಗೆ ತೆರಳಿ ಭೀಕ್ಷೆ ಬೇಡುತ್ತಿದ್ದರು ಎನ್ನಲಾಗಿದೆ.

ಯುವಕರ ವರ್ತನೆ ಕಂಡು ಅನುಮಾನಗೊಂಡ ಸ್ಥಳೀಯರು ಮಾರ್ಕೆಟ್ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ವಿಚಾರಣೆ ನಡೆಸಿದಾಗ ಮುಸ್ಲಿಮರ ವೇಷ ಧರಿಸಿ ಅನ್ಯಕೋಮಿನವರು ಭಿಕ್ಷೆ ಬೇಡುತ್ತಿದ್ದ ವಿಚಾರ ಬಯಲಾಗಿದೆ.


Provided by

ಇವರೆಲ್ಲರೂ ಬೀದರ್ ಜಿಲ್ಲೆಯ ಹುಮ್ನಾಬಾದ್ ನವರು ಎಂದು ತಿಳಿದು ಬಂದಿದ್ದು, ಹೊಟ್ಟೆ ಪಾಡಿಗಾಗಿ ಮುಸ್ಲಿಮರ ವೇಷ ಧರಿಸಿ ಭಿಕ್ಷೆ ಬೇಡುತ್ತಿದ್ದರು ಎಂದು ಹೇಳಲಾಗಿದೆ. ಘಟನೆಗೆ ಸಂಬಂಧಿಸಿದಂತೆ  ಬೆಳಗಾವಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಮಂಗಳೂರಿನ ಹಲವೆಡೆ ಗ್ಯಾಸ್ ವಾಸನೆ: ಆತಂಕಗೊಂಡ ಜನರು

ಕುಂಕುಮ ಇಟ್ಟು ಕಾಲೇಜಿಗೆ ಬಂದ ವಿದ್ಯಾರ್ಥಿಗೆ ಪ್ರವೇಶ ನಿರಾಕರಿಸಿದ ಕಾಲೇಜು!

ಕೊವಿಡ್ ನಂತರ ಆತಂಕ ಸೃಷ್ಟಿಸಿದ ಹಕ್ಕಿ ಜ್ವರ!

ಮಾಟಗಾತಿ ಎಂದು ಆರೋಪಿಸಿ ಮಹಿಳೆಯನ್ನು ಜೀವಂತವಾಗಿ ಸುಟ್ಟ ಗ್ರಾಮಸ್ಥರು!

ತಾಯಿಯ ಮೇಲೆ ಜೀಪ್ ಹರಿಸಿ ಭೀಕರವಾಗಿ ಹತ್ಯೆ ಮಾಡಿದ ಪಾಪಿ ಪುತ್ರ

ಇತ್ತೀಚಿನ ಸುದ್ದಿ