ಮುತ್ತೋಟು ಗ್ರೂಪ್ ಮಾಲಿಕ ನಾಲ್ಕನೇ ಮಹಡಿಯಿಂದ ಬಿದ್ದು ಸಾವು
07/03/2021
ದೆಹಲಿ: ಮುತ್ತೋಟು ಗ್ರೂಪ್ ಮಾಲಿಕ ಎಂ.ಜಿ.ಜಾರ್ಜ್ ಮುತ್ತೋಟು ತಮ್ಮ ನಿವಾಸದ ನಾಲ್ಕನೇ ಮಹಡಿಯಿಂದ ಬಿದ್ದು ಸಾವಿಗೀಡಾಗಿದ್ದು, ಚಿನ್ನದ ಮೇಲೆ ಸಾಲ ನೀಡುವ ಮುತ್ತೋಟು ಗ್ರೂಪ್ ನ ಮಾಲಿಕ ದಾರುಣವಾಗಿ ಅಂತ್ಯವಾಗಿದ್ದಾರೆ.
ಶುಕ್ರವಾರ ರಾತ್ರಿ 9 ಗಂಟೆ ಸುಮಾರಿಗೆ ಪೂರ್ವ ದೆಹಲಿಯ ಕೈಲಾಶ್ ನಗರದ ತಮ್ಮ ನಿವಾಸದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಮೇಲಿಂದ ಬಿದ್ದು ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಅವರು ಸಾವನ್ನಪ್ಪಿದ್ದಾರೆ.
71 ವರ್ಷಗಳ ಜಾರ್ಜ್ ಅವರು ಮುತ್ತೋಟು ಸಂಸ್ಥೆಯನ್ನು ಬೆಳೆಸಲು ಪ್ರಮುಖ ಪಾತ್ರವಹಿಸಿದ್ದರು. ಈ ಸಂಸ್ಥೆಯ ಶಾಖೆ ದೇಶಾದ್ಯಂತ ಇದೆ.