ನನ್ನ ಸ್ಪರ್ಧೆ ಖಚಿತ, ಇದು ನನ್ನ ಕೊನೆಯ ಸ್ಪರ್ಧೆ: ಮಾಜಿ ಸಚಿವ ರಮಾನಾಥ ರೈ
ಈ ಬಾರಿಯ ವಿಧಾನಸಭಾ ಚುನಾವಣೆಗೆ ಸ್ಪರ್ಧೆ ಮಾಡುವುದು ಖಚಿತ. ಇದು ನನ್ನ ಕೊನೆಯ ಸ್ಪರ್ಧೆಯಾಗಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ಅವರು ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಹೇಳಿಕೆ ನೀಡಿದರು. ಅಪಪ್ರಚಾರದ ಮೂಲಕ ನನ್ನನ್ನು ಕಳೆದ ಬಾರಿ ಸೋಲಾಗಿತ್ತು. ಆದರೆ ಈ ಬಾರಿ ಜನರಿಗೆ ಮನವರಿಕೆಯಾಗಿದ್ದು, ನನ್ನ ಪರ ಜನರ ನಿಲ್ಲುತ್ತಾರೆ. ಹೇಳಿದ್ದನ್ನು ಮಾಡಿದ್ದೇನೆ. ಮಾಡಿದ್ದನ್ನು ಹೇಳುತ್ತೇನೆ. ಇದು ನನ್ನ ಜಾಯಮಾನ ಎಂದು ಅವರು ಹೇಳಿದರು.
ಜನ ನನಗೆ ಆಶೀರ್ವಾದ ಮಾಡಿದ್ರೆ ಮುಂದಿನ ಅವಧಿಯಲ್ಲಿ ಅದ್ಬುತವಾದ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತೇನೆ. ಚುನಾವಣೆಗೆ ಸ್ಪರ್ಧೆ ಮಾಡುವುದು ಕೂಡ ಕಷ್ಟ. ಒಬ್ಬ ಪ್ರಾಮಾಣಿಕ ರಾಜಕಾರಣಿಗೆ ರಾಜಕೀಯ ಮಾಡುವುದು ಸುಲಭದ ಮಾತಲ್ಲ. ಭೂಮಿ ಮಾರಿ ರಾಜಕೀಯ ಮಾಡಲು ನನ್ನಿಂದ ಸಾಧ್ಯವಿಲ್ಲ. ಸುಳ್ಳು ನಾನು ಹೇಳುವುದಿಲ್ಲ ಎಂದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw