ನನ್ನ ಗಂಡ ಅಮಾಯಕ, ಅವರು ಮಾಡಿದ್ದು ಸೆಕ್ಸ್ ವಿಡಿಯೋ ಅಲ್ಲ ಕಾಮ ಪ್ರಚೋದಕ ವಿಡಿಯೋ | ಶಿಲ್ಪಾ ಶೆಟ್ಟಿ - Mahanayaka

ನನ್ನ ಗಂಡ ಅಮಾಯಕ, ಅವರು ಮಾಡಿದ್ದು ಸೆಕ್ಸ್ ವಿಡಿಯೋ ಅಲ್ಲ ಕಾಮ ಪ್ರಚೋದಕ ವಿಡಿಯೋ | ಶಿಲ್ಪಾ ಶೆಟ್ಟಿ

shilpa shetty
24/07/2021


Provided by

ಮುಂಬೈ: ಶೃಂಗಾರದ ವಿಡಿಯೋ ಅಶ್ಲೀಲ ವಿಡಿಯೋವಲ್ಲ, ನನ್ನ ಗಂಡ ಮುಗ್ಧ ಎಂದು ನಟಿ ಶಿಲ್ಪಾ ಶೆಟ್ಟಿ ತಮ್ಮ ಪತಿ ರಾಜ್ ಕುಂದ್ರಾ ಅವರನ್ನು ಸಮರ್ಥಿಸಿಕೊಂಡಿದ್ದು, ಅಶ್ಲೀಲ ವಿಡಿಯೋ ಮತ್ತು ಶೃಂಗಾರದ ವಿಡಿಯೋಗಳಿಗೆ ವ್ಯತ್ಯಾಸವನ್ನು ತಿಳಿಯಬೇಕು ಎಂದು ವಾದಿಸಿದ್ದಾರೆ.

 

ಅಶ್ಲೀಲ ಚಿತ್ರಗಳ ದಂಧೆಗೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ರಾಜ್ ಕುಂದ್ರಾ ಅವರನ್ನು ಪತ್ನಿ ಶಿಲ್ಪಾ ಶೆಟ್ಟಿ ಸಮರ್ಥಿಸಿಕೊಂಡಿದ್ದು, ತನ್ನ ಪತಿ ಸೆಕ್ಸ್ ವಿಡಿಯೋಗಳನ್ನು ಮಾಡುತ್ತಿರಲಿಲ್ಲ, ಕಾಮ ಪ್ರಚೋದಕ ವಿಡಿಯೋಗಳನ್ನು ಮಾಡುತ್ತಿದ್ದರು. ಈ ಎರಡರ ವ್ಯತ್ಯಾಸವನ್ನು ತಿಳಿದುಕೊಳ್ಳಬೇಕು ಎಂದು ಅವರು ಒತ್ತಿ ಹೇಳಿದರು.

 

ಅಶ್ಲೀಲ ಚಿತ್ರಗಳ ದಂಧೆಯಲ್ಲಿ ನಟಿ ಶಿಲ್ಪಾಶೆಟ್ಟಿಯ ಪತಿ ರಾಜ್ ಕುಂದ್ರಾ ಪ್ರಮುಖ ಸಂಚುಕೋರ ಎಂದು ಪೊಲೀಸರು ಹೇಳಿದ್ದಾರೆ. ಆದರೆ, ನಟಿ ಶಿಲ್ಪ ಶೆಟ್ಟಿ, ತನ್ನ ಪತಿ ಇನ್ನೋಸೆಂಟ್ ಎಂದು ಹೇಳಿದ್ದು, ಅವರು ಅಶ್ಲೀಲ ಚಿತ್ರ ಮಾಡಿಲ್ಲ, ಕಾಮಪ್ರಚೋದಕ ವಿಡಿಯೋಗಳನ್ನು ಮಾಡಿದ್ದಾರೆ ಎಂದು ಪೊಲೀಸರ ಬಳಿ ವಾದಿಸಿದ್ದಾರೆ.

 

ಇನ್ನೂ ನಟನೆಯ ಆಮಿಷ ನೀಡಿ ಸಂಪರ್ಕಿಸಿದ್ದ ರಾಜ್ ಕುಂದ್ರಾ ಬೆತ್ತಲೆಯಾಗಿ ಅಶ್ಲೀಲ ಚಿತ್ರದಲ್ಲಿ ನಟಿಸಲು ಒತ್ತಾಯಿಸಿದ ಬಗ್ಗೆ ನಟಿಯೋರ್ವರು ಪೊಲೀಸರಿಗೆ ತಿಳಿಸಿದ ಬಳಿಕ ಫೆಬ್ರವರಿ 4ರಂದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

 

ಇನ್ನಷ್ಟು ಸುದ್ದಿಗಳು…

 

ರೆಡ್ ಅಲಾರ್ಟ್: ಮುಂದಿನ 24 ಗಂಟೆಗಳಲ್ಲಿ ಈ ಜಿಲ್ಲೆಗಳಲ್ಲಿ ಸುರಿಯಲಿದೆ ಧಾರಾಕಾರ ಮಳೆ

121 ಅಶ್ಲೀಲ ವಿಡಿಯೋಗಳನ್ನು 12 ಲಕ್ಷ ರೂ. ಮಾರಾಟ ಮಾಡಲು ಮುಂದಾಗಿದ್ದ ರಾಜ್ ಕುಂದ್ರಾ!

ತಾಯಿಯ ಕಣ್ಣೆದುರೇ ಬಾಲಕಿ ನೀರಿನಲ್ಲಿ ಕೊಚ್ಚಿ ಹೋದಳು!

ಗಂಡನ ಅಶ್ಲೀಲ ವಿಡಿಯೋ ದಂಧೆಯ ಬಗ್ಗೆ ಶಿಲ್ಪಾ ಶೆಟ್ಟಿಯ ಮೊದಲ ಪ್ರತಿಕ್ರಿಯೆ ಏನು ಗೊತ್ತಾ?

ಅಮ್ಮ ಪ್ರತೀ ದಿನ ಜಗಳವಾಡುತ್ತಾಳೆ ಎಂದು ಕೊಂದ ಪುತ್ರ | ಹೆತ್ತವಳ ಕತ್ತು ಹಿಸುಕಿದ ಪುತ್ರ

ಇತ್ತೀಚಿನ ಸುದ್ದಿ