ಮೈದಾನದಲ್ಲಿಯೇ ಹೃದಯಾಘಾತಕ್ಕೊಳಗಾಗಿ ಮೃತಪಟ್ಟ ಕ್ರಿಕೆಟಿಗ! - Mahanayaka
7:32 PM Wednesday 5 - February 2025

ಮೈದಾನದಲ್ಲಿಯೇ ಹೃದಯಾಘಾತಕ್ಕೊಳಗಾಗಿ ಮೃತಪಟ್ಟ ಕ್ರಿಕೆಟಿಗ!

18/02/2021

ಬೆಂಗಳೂರು:  ಕ್ರಿಕೆಟ್ ಆಟಗಾರನೊಬ್ಬ ಆಟವಾಡುತ್ತಿದ್ದ ಸಂದರ್ಭ ಮೈದಾನದಲ್ಲಿಯೇ ಕುಸಿದು ಬಿದ್ದು ಮೃತಪಟ್ಟ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ಬುಧವಾರ ನಡೆಯುತ್ತಿದ್ದ ಸ್ಥಳೀಯ ಟೂರ್ನಮೆಂಟ್ ಕ್ರಿಕೆಟ್ ಸಂದರ್ಭದಲ್ಲಿ ನಡೆದಿದೆ.

47 ವರ್ಷದ ಬಾಬು ನಾಲ್ವಡೆ ಮೃತ ಆಟಗಾರನಾಗಿದ್ದು, ಮೈದಾನದಲ್ಲಿ ಬಹಳ ಕ್ರಿಯಾಶೀಲವಾಗಿ ಆಟವಾಡುತ್ತಿದ್ದ ಬಾಬು ಅವರಿಗೆ ಏಕಾಏಕಿ ಎದೆ ನೋವು ಕಾಣಿಸಿಕೊಂಡಿದೆ. ಬೌಲರ್ ಬಾಲ್ ಮಾಡಲು ತಯಾರಿ ನಡೆಸುತ್ತಿದ್ದ ವೇಳೆ ಬಾಬು ರನ್ನಿಂಗ್ ಗೆ ರೆಡಿಯಾಗಿದ್ದರು. ಇದೇ ವೇಳೆ ಅವರು ನಿಂತಿದ್ದ ಪ್ರದೇಶದಲ್ಲಿಯೇ ನೆಲಕ್ಕೆ ಬ್ಯಾಟ್ ಊರಿ ಅವರು ಕುಳಿತುಕೊಂಡಿದ್ದು, ಹಿಂದಕ್ಕೆ ಬಿದ್ದು, ಚಲನೆ ಇಲ್ಲದೇ ಸ್ತಬ್ಧರಾಗಿದ್ದಾರೆ.

ತಕ್ಷಣವೇ ಅವರನ್ನು ಸಹ ಆಟಗಾರರ ನೆರವಿನಿಂದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆದರೆ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ ಎಂದು ನಾರಾಯಣ್ ಗಾವ್ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬಾಬು ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಮರಣೋತ್ತರ ಪರೀಕ್ಷೆಯ ವೇಳೆ ತಿಳಿದು ಬಂದಿದೆ.  ಮೈದಾನದಲ್ಲಿ ನಡೆದ ಘಟನೆಯ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿವೆ.

ಇತ್ತೀಚಿನ ಸುದ್ದಿ