ಮರ ಮೈಮೇಲೆ ಬಿದ್ದು ಗಾಯಗೊಂಡಿದ್ದ ಯುವಕನನ್ನು ರಕ್ಷಿಸಿದ ಸಂಸದ ಉಮೇಶ್ ಜಾಧವ್ - Mahanayaka
6:23 AM Thursday 12 - December 2024

ಮರ ಮೈಮೇಲೆ ಬಿದ್ದು ಗಾಯಗೊಂಡಿದ್ದ ಯುವಕನನ್ನು ರಕ್ಷಿಸಿದ ಸಂಸದ ಉಮೇಶ್ ಜಾಧವ್

umesh jadhav
10/04/2021

ಕಲಬುರಗಿ: ಮರ ಮೈಮೇಲೆ ಬಿದ್ದು ಗಾಯಗೊಂಡಿದ್ದ ಯುವಕನನ್ನು ಸಂಸದ ಉಮೇಶ್ ಜಾಧವ್ ರಕ್ಷಿಸಿದ್ದು, ತಾವೇ ಪ್ರಥಮ ಚಿಕಿತ್ಸೆ ನೀಡಿ ಬಳಿಕ ಆ್ಯಂಬುಲೆನ್ಸ್ ಕರೆಸಿ ಆಸ್ಪತ್ರೆಗೆ ಸಾಗಿಸಿದ್ದಾರೆ.

ಸಂಸದರು ಬಸವಕಲ್ಯಾಣ ಉಪಚುನಾವಣೆಯ ಪ್ರಚಾರದಿಂದ ಮರಳಿ ಕಲಬುರ್ಗಿಗೆ ಬರುತ್ತಿದ್ದ ವೇಳೆ ಕಮಲಾಪುರ ಸಮೀಪ ದೊಡ್ಡ ಮರ ಬಿದ್ದು ಬೈಕ್‌ ಸವಾರ ಗಾಯಗೊಂಡಿದ್ದ.

ಇದೇ ಮಾರ್ಗದಲ್ಲಿ ಸಂಚರಿಸುತ್ತಿದ್ದ ಸಂಸದರು ವಾಹನ ನಿಲ್ಲಿಸಿ ನೋಡಿದಾಗ ಯುವಕ ಗಾಯಗೊಂಡು ಒದ್ದಾಡುತ್ತಿದ್ದ. ತಮ್ಮಲ್ಲಿದ್ದ ಪ್ರಥಮ ಚಿಕಿತ್ಸೆ ಸಲಕರಣೆಗಳನ್ನು ಬಳಸಿ ಉಪಚರಿಸಿದ ಜಾಧವ ಅವರು, ಆಂಬುಲೆನ್ಸ್ ಕರೆಯಿಸಿ ಆಸ್ಪತ್ರೆಗೆ ಸಾಗಿಸಿದರು.

ಮರ ಬಿದ್ದ ಪರಿಣಾಮ ಮರದಲ್ಲಿದ್ದ ಜೇನು ನೊಣಗಳು ಸಂಸದರು ಹಾಗೂ ಸ್ಥಳದಲ್ಲಿದ್ದ ಜನರ ಮೇಲೆ ಕಚ್ಚಿ ಗಾಯಗೊಳಿಸಿದೆ ಎಂದು ತಿಳಿದು ಬಂದಿದೆ. ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಮರವನ್ನು ಸಾರ್ವಜನಿಕರು ತೆರವುಗೊಳಿಸಿದ್ದಾರೆ.

ಇತ್ತೀಚಿನ ಸುದ್ದಿ