ಬ್ರೇಕಿಂಗ್ ನ್ಯೂಸ್: ಮೈಸೂರು ಸಾಮೂಹಿಕ ಅತ್ಯಾಚಾರ ಪ್ರಕರಣ: ಮೂವರು ಶಂಕಿತ ಆರೋಪಿಗಳ ಬಂಧನ
ಮೈಸೂರು: ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಶಂಕಿತ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ವರದಿಯಾಗಿದ್ದು, ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಪೊಲೀಸರು ಆರೋಪಿಗಳ ಬಂಧನಕ್ಕಾಗಿ ತನಿಖೆ ಬಿರುಸುಗೊಳಿಸಿದ್ದಾರೆ.
ಆಗಸ್ಟ್ 24ರಂದು ಮೈಸೂರಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ಸಾಂಸ್ಕೃತಿಕ ನಗರಿಯನ್ನು ಬೆಚ್ಚಿಬೀಳಿಸಿತ್ತು. ಆರೋಪಿಗಳ ಪತ್ತೆಗೆ ತಂಡ ರಚಿಸಿರುವ ಪೊಲೀಸರು ಸದ್ಯ ಅನುಮಾನದ ಮೇರೆಗೆ ಮೂವರು ಶಂಕಿತ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.
ಇನ್ನೂ ಘಟನಾ ಸ್ಥಳಕ್ಕೆ ಎಡಿಜಿಪಿ ಪ್ರತಾಪ್ ರೆಡ್ಡಿ, ಪೊಲೀಸ್ ಆಯುಕ್ತ ಚಂದ್ರಗುಪ್ತ ಸೇರಿದಂತೆ ಪೊಲೀಸರ ತಂಡ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿ ಸಾಕ್ಷಿಗಳನ್ನು ಸಂಗ್ರಹಿಸಿದೆ. ಕೃತ್ಯ ಎಸಗಿದ್ದ ಆರೋಪಿಗಳು ಮದ್ಯ ಸೇವಿಸಿದ್ದರು ಎಂದು ಸಂತ್ರಸ್ತರು ಹೇಳಿದ್ದಾರೆ. ಸದ್ಯ ಸ್ಥಳದಿಂದ ವಿವಿಧ ಸಾಕ್ಷಿಗಳನ್ನು ಸಂಗ್ರಹಿಸಿರುವ ಪೊಲೀಸರು ಇನ್ನಷ್ಟು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
ಇನ್ನಷ್ಟು ಸುದ್ದಿಗಳು…
ಬಾಲಕಿಗೆ ಮನೆ ಮಾಲಿಕನಿಂದ ಲೈಂಗಿಕ ಕಿರುಕುಳ | ಆರೋಪಿಯ ಬಂಧನ
ಟಾಲಿವುಡ್ ನಲ್ಲಿಯೂ ಡ್ರಗ್ಸ್ ವಾಸನೆ: ರಾಣಾ ದಗ್ಗುಬಾಟಿ ಸೇರಿದಂತೆ 12 ನಟ-ನಟಿಯರಿಗೆ ಇಡಿ ಸಮನ್ಸ್
ಮೈಸೂರು ಸಾಮೂಹಿಕ ಅತ್ಯಾಚಾರ ಪ್ರಕರಣ: ಘಟನೆಯನ್ನು ವಿವರಿಸಿದ ಸಂತ್ರಸ್ತ ವಿದ್ಯಾರ್ಥಿನಿಯ ಸ್ನೇಹಿತ
ಈಗ ಮನಮೋಹನ್ ಸಿಂಗ್ ಪ್ರಧಾನಿಯಾಗಿರುತ್ತಿದ್ದರೆ, ಭಾರತೀಯರು ರಕ್ಷಣೆಗಾಗಿ ಪರದಾಡಬೇಕಿತ್ತು | ನಳಿನ್ ಕುಮಾರ್ ಕಟೀಲ್
ದೇವರಿಗೆ ಹರಕೆ ತೀರಿಸಿ, ಕಾಲುವೆಗೆ ಇಳಿದ 8 ಮಂದಿಯ ಪೈಕಿ ಮೂವರ ದಾರುಣ ಸಾವು | ಅಷ್ಟಕ್ಕೂ ಅಲ್ಲಿ ನಡೆದದ್ದೇನು ಗೊತ್ತಾ?