ಮುತ್ತು ತಂದ ಆಪತ್ತು | ಎಲ್ಲರೆದುರು ಮೇಯರ್ ಮುತ್ತಿಟ್ಟ ಘಟನೆ ವಿರುದ್ಧ ಭಾರೀ ಆಕ್ರೋಶ
ಮೈಸೂರು: ಮೇಯರ್ ಚುನಾವಣೆಯಲ್ಲಿ ಗೆದ್ದ ಪತ್ನಿಯನ್ನು ಎತ್ತಿಕೊಂಡು ಮುತ್ತಿಟ್ಟ ವಿಷಯ ಕೌನ್ಸಿಲ್ ಸಭೆಯಲ್ಲಿ ಭಾರೀ ಗದ್ದಲಕ್ಕೆ ಕಾರಣವಾದ ಘಟನೆ ಮೈಸೂರಿನಲ್ಲಿ ನಡೆದಿದ್ದು, ಈ ಬಗ್ಗೆ ತಕ್ಷಣವೇ ಮೇಯರ್ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಲಾಗಿದೆ.
ಮೇಯರ್ ಚುನಾವಣೆಯ ದಿನ ಅಧಿಕಾರ ಸ್ವೀಕಾರದ ನಂತರ ಮೇಯರ್ ರುಕ್ಮಿಣಿ ಮಾದೇಗೌಡ ಅವರನ್ನು ಅವರ ಪತಿ ಮಾದೇಗೌಡ ಎತ್ತಿಕೊಂಡು ಎಲ್ಲರೆದುರಲ್ಲಿ ಮುತ್ತಿಟ್ಟಿದ್ದರು. ಈ ವಿಚಾರ ಕೌನ್ಸಿಲ್ ಸಭೆಯಲ್ಲಿ ಗದ್ದಲಕ್ಕೆ ಕಾರಣವಾಯಿತು.
ಪಾಲಿಕೆ ಸದಸ್ಯೆ ಸುನಂದ ಪಾಲನೇತ್ರ ಈ ವಿಚಾರ ಪ್ರಸ್ತಾಪಿಸಿ, ಮೇಯರ್ ಗೌನ್‌ಗೆ ಒಂದು ಬೆಲೆ ಇದೆ. ಅದನ್ನು ಧರಿಸಿ ಅಗೌರವ ತೋರುವಂತೆ ನಡೆದುಕೊಂಡಿರುವ ರುಕ್ಮಿಣಿ ಮಾದೇಗೌಡ ಅವರು ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ಪಾಲನೇತ್ರ ಅವರ ಪ್ರಸ್ತಾಪಕ್ಕೆ ಬಿ.ವಿ.ಮಂಜುನಾಥ್ ಕೂಡ ಧ್ವನಿಗೂಡಿಸಿದರಲ್ಲದೇ, ಮಾದೇಗೌಡರಿಗೆ ಕೌನ್ಸಿಲ್ ಸಭಾಂಗಣದ ಒಳಗೆ ಬರುವ ಅಧಿಕಾರ ಕೊಟ್ಟವರು ಯಾರು? ಮೇಯರ್ ಗೌನ್ ನಲ್ಲಿದ್ದ ಮೇಯರ್ ಜೊತೆಗೆ ಎಲ್ಲರ ಎದುರು ಈ ರೀತಿಯಾಗಿ ಮುತ್ತಿಟ್ಟಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಒಟ್ಟಿನಲ್ಲಿ ಪತ್ನಿ ಮೇಯರ್ ಆಗಿರುವ ಖುಷಿಯಲ್ಲಿ ಎಲ್ಲವನ್ನು ಮರೆತು ಮುತ್ತಿಟ್ಟ ಮಾದೇಗೌಡರ ವರ್ತನೆಗೆ ಪತ್ನಿ ಉತ್ತರಿಸುವಂತಾಗಿದೆ. ಇದಲ್ಲದೇ ಸಂಭ್ರಮಾಚರಣೆಯ ವೇಳೆ ಕೂಡ ಶಿಸ್ತುಮೀರಿ ನಡೆದುಕೊಳ್ಳಲಾಗಿದೆ ಎಂಬ ಆರೋಪ ಬೇರೆ ಕೇಳಿ ಬಂದಿದೆ.
ಲೇಡಿ ಸಿಂಗಂ ಎಂದೇ ಪ್ರಖ್ಯಾತಿ ಹೊಂದಿದ್ದ ಅರಣ್ಯಾಧಿಕಾರಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ!