ಜೀಪು ಮರಕ್ಕೆ ಡಿಕ್ಕಿ ಹೊಡೆದು ಇಬ್ಬರು ಪೊಲೀಸರು ಮೃತ್ಯು - Mahanayaka
6:08 AM Thursday 12 - December 2024

ಜೀಪು ಮರಕ್ಕೆ ಡಿಕ್ಕಿ ಹೊಡೆದು ಇಬ್ಬರು ಪೊಲೀಸರು ಮೃತ್ಯು

12/11/2020

ಮೈಸೂರು: ಮರಕ್ಕೆ ಜೀಪು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಪೊಲೀಸರು ಮೃತಪಟ್ಟ ಘಟನೆ ಮೈಸೂರು ಜಿಲ್ಲೆಯ ಕೆ.ಆರ್.ನಗರದಲ್ಲಿ ನಡೆದಿದೆ.  ಘಟನೆಯು ತಡರಾತ್ರಿ 1:30ಕ್ಕೆ ನಡೆದಿದೆ.

ಕೆ.ಆರ್.ನಗರ ತಾಲೂಕಿನ ಸಿದ್ದೇನಗೌಡನ ಕೊಪ್ಪಲು ಗ್ರಾಮದ ಬಳಿಯಲ್ಲಿ ತಡರಾತ್ರಿ 1:30ರ ಸುಮಾರಿಗೆ  ಈ ಅಪಘಾತ ಸಂಭವಿಸಿದೆ.  ಎಎಸ್ಸೈ ಮೂರ್ತಿ ಮತ್ತು ಮುಖ್ಯ ಪೇದೆ ಶಾಂತಕುಮಾರ್ ಅಪಘಾತದಲ್ಲಿ ಮೃತಪಟ್ಟವರಾಗಿದ್ದಾರೆ.

ಸಾಲಿಗ್ರಾಮ, ಬೆಟ್ಟದಪುರ ಮತ್ತು ಚುಂಚನಕಟ್ಟೆಯಲ್ಲಿ ಗಸ್ತು ಪರಿಶೀಲಿಸಿ ವಾಪಸ್ ಕೆ.ಆರ್.ನಗರಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ನಿದ್ರೆಯ ಮತ್ತು ಅಥವಾ ಬ್ರೇಕ್ ಫೇಲ್ ಆದ ಪರಿಣಾಮ ಈ ಅಪಘಾತ ಸಂಭವಿಸಿರಬಹುದು ಎಂದು ಹೇಳಲಾಗಿದೆ.

ಇತ್ತೀಚಿನ ಸುದ್ದಿ