ಯೋಗ ದಿನ: ಮೈಸೂರು ಮಹಾರಾಜರಿಗೆ ಆಹ್ವಾನ ಯಾಕಿಲ್ಲ? | ಪ್ರತಾಪ್ ಸಿಂಹ ಹೇಳಿದ್ದೇನು? - Mahanayaka
1:13 AM Wednesday 11 - December 2024

ಯೋಗ ದಿನ: ಮೈಸೂರು ಮಹಾರಾಜರಿಗೆ ಆಹ್ವಾನ ಯಾಕಿಲ್ಲ? | ಪ್ರತಾಪ್ ಸಿಂಹ ಹೇಳಿದ್ದೇನು?

prathap simha
15/06/2022

ಮೈಸೂರು: ಮೈಸೂರಿನ ಅಂಬಾವಿಲಾಸ ಅರಮನೆ ಆವರಣದಲ್ಲಿ ಜೂನ್ 21ರಂದು ನಡೆಯಲಿರುವ ಅಂತಾರಾಷ್ಟ್ರೀಯ ಯೋಗ ದಿನದಂದು ಮುಖ್ಯ ಅತಿಥಿಗಳನ್ನಾಗಿ ಯಾರಿಗೆ  ಆಹ್ವಾನ ನೀಡಬೇಕು ಎನ್ನುವುದನ್ನು ಇನ್ನೂ ತೀರ್ಮಾನಿಸಿಲ್ಲ ಎಂದು  ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.

ಯೋಗ ದಿನ ಕಾರ್ಯಕ್ರಮಕ್ಕೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಆಹ್ವಾನಿಸಿಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಚರ್ಚೆಗಳ  ಕುರಿತು ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದದರು.

ಫೇಸ್ ಬುಕ್, ವಾಟ್ಸಾಪ್, ಇನ್ ಸ್ಟಾಗ್ರಾಮ್ ನಲ್ಲಿ, ಯೋಗ ದಿನಾಚರಣೆಗೆ ಮೈಸೂರು ಮಹಾರಾಜರಿಗೆ ಆಹ್ವಾನ ಇಲ್ಲ.  ಒಂದು ಪೋಸ್ಟರ್ ಹರಡುತ್ತಿರುವುದನ್ನು ನಾನು ಕೂಡ ನೋಡಿದೆ. ಜನ ಪ್ರತಿನಿಧಿಗಳಲ್ಲಿ ಕೇವಲ, ಪ್ರಧಾನಿ, ಸಿಎಂ, ಗವರ್ನರ್, ಜಿಲ್ಲಾ ಉಸ್ತುವಾರಿ ಸಚಿವರು, ಆಯುಷ್ ಮಿನಿಸ್ಟರ್, ಮಿನಿಸ್ಟರ್ ಆಫ್ ಸ್ಟೇಟ್, ಕ್ಯಾಬಿನೆಟ್ ಮಿನಿಸ್ಟರ್ ಇವರಷ್ಟು ಜನರಿಗೆ ಮಾತ್ರವೇ ಅವಕಾಶ ನೀಡಲಾಗಿದೆ.  ಸಂಸದನಾಗಿರುವ ನನಗೂ ಅವಕಾಶವಿಲ್ಲ. ಯಾವುದೇ ಶಾಸಕರಿಗೂ ಅವಕಾಶವಿಲ್ಲ, ವಿಧಾನಪರಿಷತ್ ಸದಸ್ಯರಿಗೂ  ಅವಕಾಶವಿಲ್ಲ  ಎಂದರು.

ಇದು 8ನೇ ಯೋಗ ಕಾರ್ಯಕ್ರಮ. ಇದರಲ್ಲಿ ನಡೆದಿದ್ದು ಕೇವಲ 5 ಮಾತ್ರ. 2 ಕೊವಿಡ್ ಗೆ ಬಲಿಯಾಯಿತು. ಸ್ಟೇಜ್ ನಲ್ಲಿ ಗೊಂದಲ ಸೃಷ್ಟಿಯಾಗಬಾರದು ಎನ್ನುವ ಕಾರಣಕ್ಕಾಗಿ ಅತಿಥಿಗಳ ಸಂಖ್ಯೆ ಇಷ್ಟಕ್ಕೆ ಸೀಮಿತಗೊಳಿಸಲಾಗಿದೆ.  ಆದರೆ, ಗಣ್ಯರನ್ನು ಕರೆಯುವ ವಿಚಾರದಲ್ಲಿ ಇನ್ನು ನಿರ್ಧಾರವಾಗಬೇಕಿದೆ.  ಒಂದೆರಡು ದಿನಗಳಲ್ಲಿ ಗಣ್ಯರು ಯಾರು ಎನ್ನುವ ಬಗ್ಗೆ ತಿಳಿಯಲಿದೆ ಎಂದು ಪ್ರತಾಪ್ ಸಿಂಹ ತಿಳಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LSRN1q7jVDz3PsMb1GzrwE

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಕುಡುಕ ತಂದೆಗೆ ಹೆದರಿ ತೋಟದಲ್ಲಿ ಅಡಗಿ ಕುಳಿತ ಬಾಲಕಿ ಹಾವು ಕಡಿದು ಸಾವು!

ರಸ್ತೆಗೆ ಉರುಳಿ ಬಿದ್ದಿದ್ದ ಮರಕ್ಕೆ ಬೈಕ್ ಡಿಕ್ಕಿ:  ಬೈಕ್ ಸವಾರ ಸಾವು

ಏಕಾಏಕಿ ಹೃದಯ ಬಡಿತ ಹೆಚ್ಚಳ: ಆಸ್ಪತ್ರೆಗೆ ದಾಖಲಾದ ದೀಪಿಕಾ ಪಡುಕೋಣೆ

ಸಾಮಾಜಿಕ ಜಾಲತಾಣದಲ್ಲಿ ಪ್ರವಾದಿ ಬಗ್ಗೆ ಅವಹೇಳನ: ಯುವಕ ಅರೆಸ್ಟ್

ಜೂನ್ 20ರಂದು ಚಾಮುಂಡಿಬೆಟ್ಟಕ್ಕೆ ಪ್ರಧಾನಿ ಮೋದಿ ಭೇಟಿ

ಇತ್ತೀಚಿನ ಸುದ್ದಿ