ಮೈಸೂರು ಸಾಮೂಹಿಕ ಅತ್ಯಾಚಾರ ಪ್ರಕರಣ: 7ನೇ ಆರೋಪಿ ತಮಿಳುನಾಡಿನಲ್ಲಿ ಅರೆಸ್ಟ್ - Mahanayaka
2:56 PM Wednesday 11 - December 2024

ಮೈಸೂರು ಸಾಮೂಹಿಕ ಅತ್ಯಾಚಾರ ಪ್ರಕರಣ: 7ನೇ ಆರೋಪಿ ತಮಿಳುನಾಡಿನಲ್ಲಿ ಅರೆಸ್ಟ್

arrested
07/09/2021

ಮೈಸೂರು: ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಮೈಸೂರು ಅತ್ಯಾಚಾರ ಪ್ರಕರಣದ 7ನೇ ಆರೋಪಿಯನ್ನು ತಮಿಳುನಾಡಿನಲ್ಲಿ ಮೈಸೂರು ಪೊಲೀಸರು ಬಂಧಿಸಿದ್ದು, ತಮಿಳುನಾಡಿನ ಪೊಲೀಸರ ಸಹಕಾರದೊಂದಿಗೆ ಆರೋಪಿಯನ್ನು ಬಂಧಿಸಲಾಗಿದೆ.

ಮೈಸೂರಿನಲ್ಲಿ ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದು 4 ದಿನಗಳ ಬಳಿಕ 5 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.  ಪೊಲೀಸರ ಕಾರ್ಯಾಚರಣೆಯ ಸಂದರ್ಭದಲ್ಲಿ ಇಬ್ಬರು ಆರೋಪಿಗಳು ತಪ್ಪಿಸಿಕೊಂಡು ತಲೆ ಮರೆಸಿಕೊಂಡಿದ್ದರು.

ಕೃತ್ಯದಲ್ಲಿ 6 ಮಂದಿ ಭಾಗಿಯಾಗಿದ್ದರು ಎಂದು ಆರಂಭದಲ್ಲಿ ಹೇಳಲಾಗಿತ್ತು. ಆದರೆ, ಪೊಲೀಸರು ಆರೋಪಿಗಳನ್ನು ತಮ್ಮ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ ಇನ್ನೋರ್ವ ಕೂಡ ಈ ಪ್ರಕರಣದಲ್ಲಿ  ಭಾಗಿಯಾಗಿರವುದನ್ನು ಬಂಧಿತ ಆರೋಪಿಗಳೇ ಕಕ್ಕಿದ್ದಾರೆ.

ಸದ್ಯ ಈ ಪ್ರಕರಣದ 7ನೇ ಆರೋಪಿಯನ್ನೂ ಪೊಲೀಸರು ಬಂಧಿಸಿಯಾಗಿದೆ. ಇನ್ನೂ ಸಂತ್ರಸ್ತೆ ಹಾಗೂ ಅವರ ಕುಟುಂಬಸ್ಥರ ಸಹಕಾರದೊರೆತರೆ, ಅತ್ಯಾಚಾರಿಗಳಿಗೆ ಕಾನೂನಿನ ಬಿಸಿ ಮುಟ್ಟುವುದಂತೂ ಖಚಿತವಾಗಿದೆ. ಈ ನಿಟ್ಟಿನಲ್ಲಿ ಪೊಲೀಸರು ತೀವ್ರ ಪ್ರಯತ್ನ ನಡೆಸುತ್ತಿದ್ದಾರೆ.

ಇನ್ನಷ್ಟು ಸುದ್ದಿಗಳು…

 

ಬ್ರಾಹ್ಮಣರು ಹಾಗೂ ದಲಿತರು ಒಂದಾಗಬೇಕು | ಬಿಎಸ್ ಪಿ ವರಿಷ್ಠೆ ಮಾಯಾವತಿ ಕರೆ

ಕೇರಳದಲ್ಲಿ ನಿಫಾ ವೈರಸ್ ಪ್ರಕರಣ ಹೆಚ್ಚಳ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೈಅಲಾರ್ಟ್

ತರಗತಿ ಆರಂಭವಾದ ಬೆನ್ನಲ್ಲೇ ವಿದ್ಯಾರ್ಥಿಗಳಿಗೆ 10 ದಿನ ದಸರ ರಜೆ!

ಮಳೆಗಾಗಿ 6 ವರ್ಷ ವಯಸ್ಸಿನ ಬಾಲಕಿಯರನ್ನು ಬೆತ್ತಲೆ ಮೆರವಣಿಗೆ ಮಾಡಿಸಿದ ಗ್ರಾಮದ ಹಿರಿಯರು!

“ಬ್ರಾಹ್ಮಣರನ್ನು ನಮ್ಮ ಗ್ರಾಮಗಳಿಗೆ ಬರಲು ಬಿಡಬಾರದು” ಎಂದಿದ್ದ ಛತ್ತೀಸ್ ಗಢ ಸಿಎಂ ತಂದೆ ನಂದ ಕುಮಾರ್ ಬಘೇಲ್ ಜೈಲು ಪಾಲು!

ಕೃಷಿ ಇಲಾಖೆಯಲ್ಲಿ 210 ಕೋಟಿ ರೂ. ಭ್ರಷ್ಟಾಚಾರ: ಬಿ.ಸಿ.ಪಾಟೀಲ್ ವಿರುದ್ಧ ಎಸಿಬಿಗೆ ದೂರು

 

ಇತ್ತೀಚಿನ ಸುದ್ದಿ