ಜಮ್ಮು ಕಾಶ್ಮೀರದಲ್ಲಿ ನಿಗೂಢ ಕಾಯಿಲೆಯ ಭೀತಿ: ಜನರು ಬೆಚ್ಚಿಬಿದ್ದಿದ್ಯಾಕೆ?
ಜಮ್ಮು ಕಾಶ್ಮೀರದ ರಜೋರಿ ಜಿಲ್ಲೆಗೆ ನಿಗೂಢ ಕಾಯಿಲೆಯೊಂದು ಅಪ್ಪಳಿಸಿ ಭಯ ಮೂಡಿಸಿದೆ. 14 ವಯಸ್ಸಿಗಿಂತ ಕೆಳಗಿನ ಏಳು ಮಕ್ಕಳೂ ಸೇರಿದಂತೆ ಒಟ್ಟು ಎಂಟು ಮಂದಿಯನ್ನು ಈ ಕಾಯಿಲೆ ಬಲಿ ಪಡೆದಿದೆ. ಜಿಲ್ಲೆಯ ಬದಾಲ್ ಗ್ರಾಮದಲ್ಲಿ ವಾಸಿಸುತ್ತಿರುವ ಮೊಹಮ್ಮದ್ ರಫೀಕ್ ಅವರ ಮಗ ಇತ್ತೀಚಿನ ಬಲಿಯಾಗಿದ್ದಾನೆ.
ಆರು ದಿನಗಳ ಕಾಲ ಜಮ್ಮು ಸರಕಾರಿ ಮೆಡಿಕಲ್ ಕಾಲೇಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ರಫೀಕ್ ಅವರ ಮಗ ಆ ಬಳಿಕ ಮೃತನಾಗಿದ್ದಾನೆ. ಇದಕ್ಕಿಂತ ಮೊದಲು ಇವರ ಏಳು ಮತ್ತು ಐದು ವರ್ಷದ ಇಬ್ಬರು ಹೆಣ್ಣು ಮಕ್ಕಳು ಕೂಡ ಮೃತಪಟ್ಟಿದ್ದರು.
ಮೃತಪಟ್ಟವರೆಲ್ಲರೂ ಒಂದೇ ಗ್ರಾಮದ ಎರಡು ಕುಟುಂಬಗಳಿಗೆ ಸೇರಿದವರಾಗಿದ್ದಾರೆ. ಈಗಾಗಲೇ 28 ಮಂದಿ ಈ ಕಾಯಿಲೆಯಿಂದ ಬಳಲುತ್ತಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಕಾಯಿಲೆಯ ಸ್ವರೂಪವೇನು ಎಂಬುದನ್ನು ಅಧ್ಯಯನ ನಡೆಸಲಾಗುತ್ತಿದೆ ಎಂದು ಸರಕಾರ ತಿಳಿಸಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj