ಅಚ್ಚರಿ: ಆಸ್ಟ್ರೇಲಿಯಾದ ಕಡಲಿನಲ್ಲಿ ಇಸ್ರೋ ರಾಕೆಟ್ ಅವಶೇಷ ಪ್ರತ್ಯಕ್ಷ..!
ಕೆಲ ದಿನಗಳ ಹಿಂದೆ ಕಡಲತೀರದಲ್ಲಿ ಕಾಣಿಸಿಕೊಂಡ ನಿಗೂಢ ವಸ್ತುವು ಭಾರತೀಯ ರಾಕೆಟ್ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿಎಸ್‌ಎಲ್‌ವಿ) ನ ಅವಶೇಷಗಳು ಎಂದು ಆಸ್ಟ್ರೇಲಿಯಾದ ಬಾಹ್ಯಾಕಾಶ ಸಂಸ್ಥೆ ಸೋಮವಾರ ಘೋಷಿಸಿದೆ.
ಪಶ್ಚಿಮ ಆಸ್ಟ್ರೇಲಿಯಾದ ಜುರಿಯನ್ ಕೊಲ್ಲಿಯ ಸಮೀಪವಿರುವ ಕಡಲತೀರದಲ್ಲಿರುವ ವಸ್ತುವು ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿಎಸ್‌ಎಲ್‌ವಿ) ನ ಅವಶೇಷಗಳೆಂದು ನಾವು ತೀರ್ಮಾನಿಸಿದ್ದೇವೆ.
ಪಿಎಸ್‌ಎಲ್‌ವಿ ಮಧ್ಯಮ-ಎತ್ತುವ ಉಡಾವಣಾ ವಾಹನವಾಗಿದ್ದು ಇದನ್ನು ಇಸ್ರೋ ನಿರ್ವಹಿಸುತ್ತದೆ ಎಂದು ಆಸ್ಟ್ರೇಲಿಯಾದ ಬಾಹ್ಯಾಕಾಶ ಸಂಸ್ಥೆ ಟ್ವೀಟ್ ಮಾಡಿದೆ. ಆದರೆ ಇದು ಇಸ್ರೋ ಗೆ ಸೇರಿದ್ದು ಎಂದು ಹೇಗೆ ನಿರ್ಧರಿಸಲಾಯಿತು ಎಂಬುದನ್ನು ಅದು ತಿಳಿಸಿಲ್ಲ.
ಈ ಕುರಿತು ಇಸ್ರೋದ ಹಿರಿಯ ಅಧಿಕಾರಿಯೊಬ್ಬರು ಪ್ರತಿಕ್ರಿಯೆ ನೀಡಿದ್ದು, ಆಸ್ಟ್ರೇಲಿಯಾದಲ್ಲಿ ಬೀಚ್ ನಲ್ಲಿರುವ ಬೃಹತ್ ವಸ್ತುವು ತನ್ನ ಪಿಎಸ್‌ಎಲ್‌ವಿ ರಾಕೆಟ್‌ನ ಭಾಗವೇ ಎಂಬುದನ್ನು ಖಚಿತಪಡಿಸಲು ಅಥವಾ ನಿರಾಕರಿಸಲು ಸಾಧ್ಯವಿಲ್ಲ. ನಾವು ಅದನ್ನು ನೋಡದೆ, ಪರಿಶೀಲಿಸದೆ ಅದರ ಬಗ್ಗೆ ಏನೂ ಖಚಿತಪಡಿಸಲು ಅಥವಾ ನಿರಾಕರಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಮೊದಲು ಆಸ್ಟ್ರೇಲಿಯನ್ ಬಾಹ್ಯಾಕಾಶ ಸಂಸ್ಥೆ ವಸ್ತುವಿನ ವಿಡಿಯೋ ವನ್ನು ಕಳುಹಿಸಬೇಕು. ಅದರ ಮೇಲೆ ಗುರುತುಗಳಿದ್ದರೆ ನಾವು ನೋಡಬೇಕು. ಅವರು ವಸ್ತುವನ್ನು ಬೇರೆ ಸ್ಥಳಕ್ಕೆ ಸ್ಥಳಾಂತರಿಸಬೇಕು. ಅಗತ್ಯವಿದ್ದರೆ, ಇದು ಭಾರತೀಯ ರಾಕೆಟ್‌ಗೆ ಸೇರಿದೆಯೇ ಎಂದು ಖಚಿತಪಡಿಸಿಕೊಳ್ಳಲು ಇಸ್ರೋ ಅಧಿಕಾರಿಗಳು ಅಲ್ಲಿಗೆ ಹೋಗಬಹುದು. ಈ ನಿಟ್ಟಿನಲ್ಲಿ ಆಸ್ಟ್ರೇಲಿಯಾದ ಬಾಹ್ಯಾಕಾಶ ಸಂಸ್ಥೆ ಭಾರತೀಯ ಬಾಹ್ಯಾಕಾಶ ಸಂಸ್ಥೆಯನ್ನು ಸಂಪರ್ಕಿಸಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BnbLYSQaXK1Hate4P0Bt3B
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw